ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶಿಫಾರಸಿನ ಮೇರೆಗೆ ಬಂಟ್ವಾಳ ಕ್ಷೇತ್ರದ ಒಟ್ಟು 10 ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈ ರಸ್ತೆಗಳು ಲೋಕೋಪಯೋಗಿ ಇಲಾಖೆಯಿಂದ ನಿರ್ವಹಣೆಗೆ ಒಳಪಡಲಿದೆ.
ಅಜ್ಜಿಬೆಟ್ಟು-ಹೊಕ್ಕಾಡಿಗೋಳಿ-ಸಿದ್ಧಕಟ್ಟೆ-ಕರ್ಪೆ-ಅಣ್ಣಳಿಕೆ-ಕರಿಮಲೆ ರಸ್ತೆ 33 ಕಿ.ಮೀ, ಮಣಿಹಳ್ಳ-ಅಜಿಲಮೊಗರು-ಬಜ-ಸರಳೀಕಟ್ಟೆ-ಉಪ್ಪಿನಂಗಡಿ ರಸ್ತೆ 30 ಕಿ.ಮೀ, ಮಡಂತ್ಯಾರು-ಪಾಂಡವರಕಲ್ಲು-ಕಕ್ಯಪದವು-ಮಾವಿನಕಟ್ಟೆ ರಸ್ತೆ 18 ಕಿ.ಮೀ, ನೇರಳಕಟ್ಟೆ- ಪಿಲಾತಬೆಟ್ಟು-ವೇಣೂರು ರಸ್ತೆ 15 ಕಿ.ಮೀ, ಪಾಣೆಮಂಗಳೂರು-ನರಿಕೊಂಬು-ದಾಸಕೋಡಿ ರಸ್ತೆ 10 ಕಿ.ಮೀ, ಅನಂತಾಡಿ-ಮಂಗಳಪದವು-ಕೋಡಪದವು ರಸ್ತೆ 12 ಕಿ.ಮೀ., ಕುಡ್ತಮುಗೇರು-ಬೊಳ್ಪಾದೆ-ಕನ್ಯಾನ-ಮುಚ್ಚಿರಪದವು ರಸ್ತೆ 12 ಕಿ.ಮೀ, ಕನ್ಯಾನ -ನೆಲ್ಲಿಕಟ್ಟೆ- ಆನೆಕಲ್ಲು ರಸ್ತೆ 10 ಕಿ.ಮೀ, ಎನ್.ಸಿ.ರೋಡು-ನೆಲ್ಲಿಗುಡ್ಡೆ-ಕಾರಿಂಜಬಲು ರಸ್ತೆ 10 ಕಿ.ಮೀ, ಕೋಡಪದವು-ಮಾದಕಟ್ಟೆ-ಕರಾಯಿ-ಕುಡ್ತಮುಗೇರು ರಸ್ತೆ 8 ಕಿ.ಮೀ.ವ್ಯಾಪ್ತಿ ಮೇಲ್ದರ್ಜೆಗೇರಿದೆ ಎಂದು ಶಾಸಕರು ತಿಳಿಸಿದ್ದಾರೆ.