ಬಂಟ್ವಾಳ

ಘೋಷಣೆಗಳಲ್ಲೇ ಪ್ರಚಾರ ಗಿಟ್ಟಿಸಿಕೊಂಡ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ರಮಾನಾಥ ರೈ ಆರೋಪ

ರಾಜ್ಯ ಸರ್ಕಾರ ಬಡವರ, ಕೂಲಿ ಕಾರ್ಮಿಕರ, ಕೃಷಿಕರ, ನೆರೆಪೀಡಿತರ ಮತ್ತು ಜನಸಾಮಾನ್ಯರ ಪರವಾಗಿಲ್ಲ ಎಂದು ಆರೋಪಿಸಿ  ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ಪಾಣೆಮಂಗಳೂರು ಮತ್ತು ಬಂಟ್ವಾಳ  ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಅಂತ್ಯಸಂಸ್ಕಾರಕ್ಕೆ ನೀಡುವ ಹಣವನ್ನೂ ಒದಗಿಸಲು ಆಗಿಲ್ಲ, ಬಡವರಿಗೆ ಒಂದೇ ಒಂದು ಮನೆ ನೀಡದೆ, ಜಾಹೀರಾತು ಮೂಲಕ ಪ್ರಚಾರ ಗಿಟ್ಟಿಸಿಕೊಂಡಿದೆ ಎಂದರು.

ಬಡವರ, ಕೂಲಿಕಾರ್ಮಿಕರ, ನೆರೆ ಪೀಡಿತರಿಗೆ ಹಾಗೂ ಜನಸಾಮಾನ್ಯರಿಗೆ ಸರ್ಕಾರ ತಲುಪೇ ಇಲ್ಲ, ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದ ಪಾಲು ಇತ್ತು ಎಂಬುದನ್ನು ಜ್ಞಾಪಿಸದ ಬಿಜೆಪಿಯವರು, ಬಳಿಕ ಮೋದಿ ಸರ್ಕಾರ ಬಂದಾಗ, ಸಿದ್ಧರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಉಚಿತ ಸವಲತ್ತು ನೀಡಿದಾಗ ಅದರಲ್ಲಿ ಕೇಂದ್ರದ ಪಾಲೂ ಇದೆ ಎಂದರು. ವಾಸ್ತವವಾಗಿ ಉಚಿತ ಅಕ್ಕಿ ಯೋಜನೆಯನ್ನು ಜಾರಿಗೆ ತಂದದ್ದೇ ಕಾಂಗ್ರೆಸ್ ಸರ್ಕಾರ. ಇಂದಿರಾ ಕ್ಯಾಂಟೀನ್, ಭೂಮಸೂದೆಯಂಥ ಕಾನೂನುಗಳ ಮೂಲಕ ಬಡವರ ಪರವಾಗಿದ್ದರೆ, ಬಿಜೆಪಿಯವರು ಕೇವಲ ಟೀಕೆ ಮಾಡುವುದರಲ್ಲೇ ಕಾಲ ಕಳೆದರು. ಕೇಂದ್ರ, ರಾಜ್ಯಗಳೆರಡರಲ್ಲೂ ಅಧಿಕಾರ ಹೊಂದಿದರೂ ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೆ, ಭರವಸೆಗಳು ಹಾಗೂ ಮಾಧ್ಯಮಗಳಲ್ಲಿ ಪ್ರಚಾರ ನೀಡುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಬಿಜೆಪಿ ಸರಕಾರ ಬಂದ ಬಳಿಕ ಯಾವೊಬ್ಬ ಬಡವನಿಗೂ ಮನೆ ಸಿಕ್ಕಿಲ್ಲ. ಕಳೆದ ಎರಡು ವರ್ಷದಿಂದ ಅಂತ್ಯ ಸಂಸ್ಕಾರಕ್ಕೆ ನೀಡುವ ಹಣವನ್ನೂ ಈ ಸರಕಾರ ನೀಡುತ್ತಿಲ್ಲ, ಪೊಲೀಸರಿಗೆ ನೀಡುತ್ತಿದ್ದ ಭತ್ಯೆಯನ್ನೂ ನಿಲ್ಲಿಸಿದ್ದು, ಕೇವಲ ಘೋಷಣೆಯನ್ನಷ್ಟೇ ಮಾಡುತ್ತಿದೆ ಎಂದು ಆರೋಪಿಸಿದರು. ಮರಳುಗಾರಿಕೆಯು ಅನಧಿಕೃತವಾಗಿ ನಡೆಯುತ್ತಿದೆ. 2 ಸಾವಿರ ರೂಪಾಯಿಗೆ ಮರಳು ಎಂದು ಒಂದು ದಿನ ಹೇಳಿದರು, ಬಳಿಕ ಹಾಗಲ್ಲ ಎಂದು ವರಸೆ ಬದಲಾಯಿಸಿದರು ಎಂದು ಲೇವಡಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ ರಾಜ್ಯಸರಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಜನರ ಮೇಲೆ ಸವಾರಿ ಮಾಡುತ್ತಿದೆ ಎಂದು ಆರೋಪಿಸಿದರು.

ಜಿ.ಪಂ. ಸದಸ್ಯ ಎಂ.ಎಸ್ ಮಹಮ್ಮದ್  ಮಾತನಾಡಿ, ಹಂತಹಂತವಾಗಿ ರಾಜ್ಯ ಸರ್ಕಾರ ಪೊಳ್ಳು ಆಶ್ವಾಸನೆಗಳನ್ನು ನೀಡುತ್ತಾ, ಯಾವುದೇ ಸೌಲಭ್ಯಗಳನ್ನು ನೀಡದೆ ಕೇವಲ ಭರವಸೆಗಳ ಮೂಲಕ ಕಾರ್ಯಭಾರ ಮಾಡುತ್ತಿದೆ ಎಂದರು.

ಪಕ್ಷ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಶೇಖರ ಪೂಜಾರಿ, ಸುರ್ದಶನ ಜೈನ್, ಬಿ.ಎಂ.ಅಬ್ಬಾಸ್ ಆಲಿ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಸದಾಶಿವ ಬಂಗೇರ, ಪದ್ಮನಾಭ ರೈ, ಪ್ರಶಾಂತ್  ಕುಲಾಲ್, ಮಾಯಿಲಪ್ಪ ಸಾಲ್ಯಾನ್, ಚಿತ್ತರಂಜನ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಲೋಲಾಕ್ಷ ಶೆಟ್ಟಿ, ಲುಕ್ಮಾನ್, ವೆಂಕಪ್ಪ ಪೂಜಾರಿ, ಜನಾರ್ದನ ಚೆಂಡ್ತಿಮಾರ್, ಜೆಸಿಂತ ಡಿಸೋಜಾ, ಜಗದೀಶ್ ಕುಂದರ್, ಐಡಾ ಸುರೇಶ್, ಮಹಮ್ಮದ್ ನಂದರಬೆಟ್ಟು, ವಿನಯ ಕುಮಾರ್, ಮಧುಸೂದನ್ ಶೆಣೈ, ಸಂಜೀವ ಪೂಜಾರಿ, ವಾಸು ಪೂಜಾರಿ, ಗಂಗಾಧರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts