ಬಂಟ್ವಾಳ: ಕೊಳ್ನಾಡು ಬಿಜೆಪಿ ಮಹಾಶಕ್ತಿಕೇಂದ್ರದ ಪ್ರಮುಖರ ಸಭೆ ಅಧ್ಯಕ್ಷ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು ಅಧ್ಯಕ್ಷತೆಯಲ್ಲಿ ಕುಡ್ತಮುಗೇರುವಿನಲ್ಲಿ ನಡೆಯಿತು.
ಮಾಜಿ ಶಾಸಕ, ಕೊಳ್ನಾಡು ಮಹಾಶಕ್ತಿಕೇಂದ್ರ ಚುನಾವಣಾ ಪ್ರಭಾರಿ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ಚುನಾವಣೆ ಎದುರಿಸುವ ಕುರಿತು ಮಾಹಿತಿ ನೀಡಿದರು. ಪಕ್ಷದ ಸೇವಾ ಸಪ್ತಾಹ ಕಾರ್ಯಕ್ರಮ ಹಾಗೂ ಗ್ರಾಮ ಪಂಚಾಯತ್ ಚುನಾವಣಾ ಪೂರ್ವಸಿದ್ಧತೆಯ ಬಗ್ಗೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸುವ ಬಗ್ಗೆ ಮಾಹಿತಿಯನ್ನು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ಹಾಗೂ ಡೊಂಬಯ್ಯ ಅರಳ ನೀಡಿದರು. ಮಂಡಲ ಚುನಾವಣಾ ಸಹ ಪ್ರಭಾರಿಗಳಾದ ಪ್ರಭಾಕರ ಪ್ರಭು ಮಾರ್ಗದರ್ಶನ ನೀಡಿದರು. ಕೊಳ್ನಾಡು ಮಹಾಶಕ್ತಿಕೇಂದ್ರ ಪ್ರಧಾನಕಾರ್ಯದರ್ಶಿ ಲೋಹಿತ್, ತಾಲೂಕು ಪಂಚಾಯತ್ ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಜಯರಾಮ್ ನಾಯ್ಕ್ ಕುಂಟ್ರಕಲ, ಮಂಡಲ ರೈತ ಮೋರ್ಚಾ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಕಟ್ಟತ್ತಿಲ ಕೋಡಿ,ಮಂಡಲ ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿ ಶ್ರೀಲತಾ ಶೆಟ್ಟಿ ಪಟ್ಲ, ಪಕ್ಷದ ವಿವಿಧ ಜವಾಬ್ದಾರಿ ವಹಿಸಿಕೊಂಡಿರುವ ಪ್ರಮುಖರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಬೂತ್ ಅಧ್ಯಕ್ಷರು -ಪ್ರಧಾನಕಾರ್ಯದರ್ಶಿಗಳು ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು. ಗಣೇಶ್ ಆಚಾರ್ಯ ಮಂಚಿ ಪ್ರಾರ್ಥನೆಗೈದರೆ, ಯೋಗೀಶ್ ಕುಂಟ್ರಕಲ ಕಾರ್ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…