ಬಂಟ್ವಾಳ ಟೌನ್ ರೋಟರಿ ಕ್ಲಬ್ ವತಿಯಿಂದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ದೇಲಂತಬೆಟ್ಟಿನ ಸಂತ ಪೌಲ್ ಚರ್ಚ್ ನಲ್ಲಿ ಕೋವಿಡ್ ರಾಪಿಡ್ ಟೆಸ್ಟ್ ನಡೆಸಲಾಯಿತು. ರೋಟರಿ ಟೌನ್ ಅಧ್ಯಕ್ಷ ಪದ್ಮನಾಭ ರೈ, ಕನ್ಯಾನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಅಶ್ವಿನ್ ಸಾಗರ್ ಮುಂದಾಳತ್ವ ವಹಿಸಿದ್ದರು. ಚರ್ಚ್ ಧರ್ಮಗುರು ಸುನೀಲ್ ಪ್ರವೀಣ್ ಪಿಂಟೊ, ರೋಟರಿ ಕಾರ್ಯದರ್ಶಿ ಕಿಶೋರ್ ಎಸ್. ಕುಮಾರ್, ಎಎನ್ ಎಂ ಮಂಜುಳಾ, ಲ್ಯಾಬ್ ಟೆಕ್ನಿಶಿಯನ್ ಅಬ್ದುಲ್ ನಜೀರ್, ರೋಟರಿಯನ್ನರಾದ ಸತೀಶ್ ಕುಮಾರ್, ಚಿತ್ತರಂಜನ್ ಶೆಟ್ಟಿ, ಗಣೇಶ್ ಶೆಟ್ಟಿ, ಸುಂದರ್ ಬಂಗೇರ, ಸುಧೀರ್ ಶೆಟ್ಟಿ, ಸುಜಾತ ಪಿ ರೈ ಭಾಗವಹಿಸಿದ್ದರು.