Categories: Uncategorized

ಚಿಕಿತ್ಸೆಗೆ ಹಣವಿಲ್ಲದೆ ಮನೆಯಲ್ಲೇ ಮಲಗಿದ ಸ್ಥಿತಿಯಲ್ಲಿ ಯುವಕ: ದಾನಿಗಳ ನೆರವು

ಜಾಹೀರಾತು

ದೈವದ ಪರಿಚಾರಕಾರನಾಗಿ ಸೇವೆ ಸಲ್ಲಿಸುತ್ತಿದ್ದ ಯುವಕನೋರ್ವ ಸೊಂಟದಿಂದ ಕೆಳಭಾಗ ಬಲ ಕಳೆದುಕೊಂಡು ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಉಳಿದಿದ್ದಾರೆ.  ಕೈಯಲ್ಲಿ ಹಣವಿಲ್ಲದೆ, ಸರಿಯಾದ  ಚಿಕಿತ್ಸೆ ಪಡೆಯಲು ಸಾಧ್ಯವಾಗದೆ  ದಾನಿಗಳ ಸಹಾಯಕ್ಕಾಗಿ ಬಡ ಕುಟುಂಬ ಎದುರು ನೋಡುತ್ತಿದೆ. ಸಜೀಪಮುನ್ನೂರು ಗ್ರಾಮದ ಶಾಂತಿನಗರ ನಿವಾಸಿ ಸುಶೀಲ ಎಂಬವರ ಪುತ್ರ ಶಶಿಧರ (34) ಮಲಗಿದ್ದಲ್ಲೇ ಇರುವ ಯುವಕ.

ನೇಮ, ಕೋಲೋತ್ಸವಗಳಲ್ಲಿ ದೈವಗಳಿಗೆ ಜೀಟಿಗೆ ಹಿಡಿಯುವ ಕಾಯಕವನ್ನು ಮಾಡುತ್ತಿದ್ದಾರೆ. ತಂದೆಯ ಮರಣ ನಂತರ ತಾಲೂಕಿನ ವಿವಿಧ ಭಾಗಗಳ ದೈವಸ್ಥಾನಗಳಲ್ಲಿ ಜೀಟಿಗೆ ಹಿಡಿಯುವ ಜೊತೆಗೆ ಪರಿಚಾರಕರಾಗಿ  ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಬಂಟ್ವಾಳ ಸಮೀಪದ ದೈವಸ್ಥಾನವೊಂದರಲ್ಲಿ ಕೆಲಸ ನಿರ್ವಹಿಸಿ ಮನೆಗೆ ಮರಳಿದ ಇವರಿಗೆ ಜ್ವರ ಕಾಣಿಸಿಕೊಂಡು ಬಳಿಕ ಕೈಕಾಲುಗಳಲ್ಲಿ ಬಲವೇ ಇಲ್ಲದಂತಾಗಿತ್ತು. ದೇಹದಲ್ಲಿ ದಿನದಿಂದ ದಿನಕ್ಕೆ ನೋವು ಬಾಧಿಸುತ್ತಿದ್ದು ಆಸ್ಪತ್ರೆಗೆ ದಾಖಲಾಗಲು ದಾನಿಗಳ ನೆರವು ಎದುರು ನೋಡುತ್ತಿದ್ದಾರೆ. ಶಾಂತಿ ನಗರದ ಸಣ್ಣ ಮನೆಯಲ್ಲಿ ಶಶಿಧರ ತನ್ನ ತಾಯಿಯೊಂದಿಗೆ. ಇಬ್ಬರೇ ಇರುವ ಈ   ಮನೆಗೆ ಆಧಾರವಾಗಬೇಕಿದ್ದ ಮಗ ಮಲಗಿದ್ದಲ್ಲೇ ಇದ್ದಾನೆ. ತಾಯಿ ಬೀಡಿ ಕಟ್ಟಿ ಬರುವ ಸಂಪಾದನೆ ಮನೆ ನಿಭಾಯಿಸಲು ಸಾಲುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಸಜಿಪ ಜನಸೇವಾ ಟ್ರಸ್ಟ್ ವತಿಯಿಂದ ಶಶಿಧರ್ ಮಡಿವಾಳ ಚಿಕಿತ್ಸೆಗೆ ಸಹಾಯಧನದ ಚೆಕ್ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದಂದು ಹಸ್ತಾಂತರಿಸಲಾಯಿತು ಜನ ಸೇವಾ ಟ್ರಸ್ಟ್ ರಿಜಿಸ್ಟರ್ ಅಧ್ಯಕ್ಷ ಯಶವಂತ ದೇರಾಜೆ,  ಶ್ರೀಕಾಂತ್ ಶೆಟ್ಟಿ ಸಂಕೇಶ, ಎಂ. ಸುಬ್ರಹ್ಮಣ್ಯ ಭಟ್, ನಿತಿನ್ ಅರಸ, ರಮೇಶ್ ಕುಲಾಲ್, ವಿಶ್ವನಾಥ ಬೆಲ್ಕೆರಾ, ಸುರೇಶ್ ಬಂಗೇರ, ಭಾಸ್ಕರ, ಪ್ರಶಾಂತ, ನವೀನ್ ಉಪಸ್ಥಿತರಿದ್ದರು.

ನೆರವು ನೀಡುವ ದಾನಿಗಳು ಯುವಕನ ತಾಯಿ ಸುಶೀಲ ಅವರ ಖಾತೆಗೆ ಅವರಿಗೆ ಕಾಲ್ ಮಾಡಿ ಖಾತೆಯ ಸಂಖ್ಯೆ ಖಚಿತಪಡಿಸಿಕೊಂಡು, ಹಣ ಜಮಾ ಮಾಡಬಹುದಾಗಿದೆ. ಅಥವಾ ಅವರ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದಾಗಿದೆ. 9900713379  ACCOUNT: ಸುಶೀಲ,  01352210010030 ಸಿಂಡಿಕೇಟ್ ಬ್ಯಾಂಕ್ IFSC ಕೋಡ್: SYNB0000135

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts