ಬಂಟ್ವಾಳ: ಬಿ.ಸಿ.ರೋಡಿನ ಗೂಡಿನಬಳಿಯಲ್ಲಿರುವ ಬಿ.ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಹೆಚ್ಚುವರಿ ಕೊಠಡಿ, ಪ್ರಯೋಗಾಲಯ ಕೊಠಡಿ ಮತ್ತು ಶೌಚಾಲಯವನ್ನೊಳಗೊಂಡ ಸುಮಾರು 1 ಕೋಟಿ ರೂ ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶುಕ್ರವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿದರು.
ನೂತನ ಕಟ್ಟಡದ ನೆಲ ಅಂತಸ್ತಿನಲ್ಲಿ 3 ತರಗತಿ ಕೊಠಡಿ, ಪ್ರಥಮ ಅಂತಸ್ತಿನಲ್ಲಿ 2 ಪ್ರಯೋಗಶಾಲೆ ಕೊಠಡಿಗಳ ನಿರ್ಮಾಣ ಹಾಗೂ ಮಹಿಳಾ ಶೌಚಾಲಯ ನಿರ್ಮಾಣವನ್ನು ಮಾಡಲಾಗುವ ಕುರಿತು ಮಂಜೂರಾದ ಅಂದಾಜುಪಟ್ಟಿಯಲ್ಲಿದೆ. ಇದೇ ವೇಳೆ ಪೆಟ್ರೋನೆಟ್ ಕಂಪನಿಯು ಸಿಎಸ್ ಆರ್ ನಿಧಿಯಿಂದ ಕೊಡುಗೆಯಾಗಿ ನೀಡಿದ ವಿಜ್ಞಾನ ಪ್ರಯೋಗಾಲಯದ ಎರಡು ಕೊಠಡಿಗಳನ್ನು ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕೊರೊನಾವನ್ನು ದೇಶ ಸಮರ್ಥವಾಗಿ ಎದುರಿಸುತ್ತಿದ್ದು, ಇಂಥ ಕಠಿಣ ಸಂದರ್ಭದಲ್ಲೂ ವಿದ್ಯಾರ್ಥಿಗಳಿಗೆ ಬೇಕಾದ ಅನುಕೂಲಗಳನ್ನು ಸರ್ಕಾರ ಕಲ್ಪಿಸಿಕೊಡುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭ ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಗುತ್ತಿಗೆದಾರರಾದ ಜಗದೀಪ್ ಡಿ.ಸುವರ್ಣ, ಪೆಟ್ರೋನೆಟ್ ಸಂಸ್ಥೆಯ ಸ್ಟೇಶನ್ ಇನ್ ಚಾರ್ಜ್ ರಾಜನ್ ಜಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ರಜನಿ ಚಿಕ್ಕಯ್ಯಮಠ, ಪ್ರಿನ್ಸಿಪಾಲ್ ಡಿ.ಯೂಸುಫ್, ಅಭಿವೃದ್ಧಿ ಸಮಿತಿ ಸದಸ್ಯರಾದ ಡಾ. ಶಾಮ ಭಟ್, ಸುಷ್ಮಾ ಚರಣ್, ಶ್ರೀನಿವಾಸ ಪೂಜಾರಿ ಮೇಲ್ಕಾರ್, ಮಹಮ್ಮದ್ ಗೂಡಿನಬಳಿ, ಸುರೇಶ್ ಸಾಲಿಯಾನ್, ಯಶೋಧಾ, ಸುಜಾತಾ, ಹರೀಶ್ಚಂದ್ರ ಚಿಕ್ಕಯ್ಯಮಠ, ಸಚಿನ್, ದಿನೇಶ್ ಅಮ್ಟೂರು, ಭರತ್, ಪದ್ಮನಾಭ ಗಟ್ಟಿ, ಪ್ರಮುಖರಾದ ಸುದರ್ಶನ ಬಜ, ಪ್ರಮೋದ್ ಅಜ್ಜಿಬೆಟ್ಟು, ಪ್ರದೀಪ್ ಅಜ್ಜಿಬೆಟ್ಟು, ಪಿಡಬ್ಲ್ಯುಡಿ ಎಂಜಿನಿಯರ್ ಅಮೃತ್ ಕುಮಾರ್, ಉಪನ್ಯಾಸಕರಾದ ದಾಮೋದರ್, ಅಬ್ದುಲ್ ರಝಾಕ್ ಅನಂತಾಡಿ ಮತ್ತಿತರರು ಉಪಸ್ಥಿತರಿದ್ದರು. ಪ್ರಿನ್ಸಿಪಾಲ್ ಯೂಸುಫ್ ಸ್ವಾಗತಿಸಿ, ವಂದಿಸಿದರು.