ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ವರ್ಲ್ಡ್ ಫೋಟೋಗ್ರಫಿ ಡೇ ಅಂಗವಾಗಿ ಬಂಟ್ವಾಳ ತಾಲೂಕಿನ ಹಿರಿಯ ಛಾಯಾಗ್ರಾಹಕರಾದ ಸತೀಶ್ ಕುಮಾರ್ ಕಾರ್ತಿಕ್ ಸ್ಟುಡಿಯೊ, ಸುಕುಮಾರ್ ಬಂಟ್ವಾಳ ಭಗವತಿ ಸ್ಟುಡಿಯೊ, ಕಿಶೋರ್ ಪ್ರೀತಿ ಸ್ಟುಡಿಯೋ ಅವರನ್ನು ಅಧ್ಯಕ್ಷ ಪದ್ಮನಾಭ ರೈ ನೇತೃತ್ವದಲ್ಲಿ ನಿಯೋಜಿತ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಸನ್ಮಾನಿಸಿದರು. ಈ ಸಂದರ್ಭ ಝೋನಲ್ ಲೆಫ್ಟಿನೆಂಟ್ ಜಯರಾಜ್ ಎಸ್ ಬಂಗೇರ, ಚುನಾಯಿತ ಅಧ್ಯಕ್ಷ ಶನ್ಫತ್ ಷರೀಫ್, ಶೇಷಪ್ಪ ಮೂಲ್ಯ, ಜಶ್ಮಿ ಕಿಶೋರ್, ಗಗನ್ ಕಿಶೋರ್ ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…