ಬೆಳಗ್ಗೆ 6ರಿಂದ ಆರಂಭಗೊಂಡಿದೆ. ಸಂಜೆ 6ರವರೆಗೆ ಇರುತ್ತದೆ. #FlyFromIXE ಹಾಕಿ, ಟ್ವೀಟ್ ಮಾಡಿರಿ. ಇದು ಮಂಗಳೂರು ಏರ್ ಪೋರ್ಟ್ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ತಲುಪುವಂತೆ ಮಾಡಲು ಟ್ವಿಟ್ಟರ್ ಅಭಿಯಾನ.
ಮಂಗಳೂರು, ಬಂಟ್ವಾಳ, ಪುತ್ತೂರು ಸಹಿತ ಹಲವು ಪ್ರದೇಶಗಳ ಯುವಕರು ಸೇರಿ ರಚಿಸಿರುವ ಟ್ವಿಟ್ಟರ್ ಅಭಿಯಾನದ ಗುಂಪಿದು. ಪುತ್ತೂರಿನ 18ರ ಹರೆಯದ ಯುವಕ ಶ್ರೀಕರ ಇದರ ರೂವಾರಿಗಳಲ್ಲೊಬ್ಬರು. ಇವರಂತೆ ಬೇರೆ ಬೇರೆ ಭಾಗಗಳ ಯುವಕರು, ಹಿರಿಯರು ಟ್ವೀಟ್ ನ ಅಗತ್ಯಗಳು ಹಾಗೂ ಮಂಗಳೂರು ವಿಮಾನ ನಿಲ್ದಾಣದಿಂದ ಜನಸಾಮಾನ್ಯರಿಗೂ ಒದಗಬಹುದಾದ ಲಾಭಗಳನ್ನು ಪಾಯಿಂಟ್ ಮಾಡಿಕೊಂಡಿದ್ದಾರೆ. ಎಲ್ಲವನ್ನೂ ಬೆಳಗ್ಗಿನಿಂದ ಸಂಜೆವರೆಗೆ ಸತತ ಟ್ವೀಟ್ ಮಾಡುವುದರ ಮೂಲಕ ಟ್ವಿಟ್ಟರ್ ನಲ್ಲಿ ಜನಪ್ರಿಯಗೊಳಿಸಿ, ಪ್ರಧಾನಿಯನ್ನು ತಲುಪಿಸುವಂತೆ ಮಾಡುವುದು ಇವರ ಉದ್ದೇಶ.
ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಒಟ್ಟಾರೆ ಅಭಿವೃದ್ಧಿಗಾಗಿ ಟ್ವಿಟರ್ ಅಭಿಯಾನದ ಹ್ಯಾಷ್ ಟ್ಯಾಗ್ ಇದು. ಪ್ರಧಾನಿ @narendramodi, ನಾಗರಿಕ ವಿಮಾನಯಾನ ಸಚಿವಾಲಯದ ಟ್ವೀಟರ್ ಖಾತೆ @MoCAGoI, ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪೂರಿ @HardeepSPuri, ವಿಮಾನ ನಿಲ್ದಾಣ ಪ್ರಾಧಿಕಾರ @AAIOfficial ಗೆ ಟ್ವೀಟ್ ಮಾಡಬಹುದು.