ಬಂಟ್ವಾಳ: ಬಂಟ್ವಾಳ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವತಿಯಿಂದ ನಶಾ ಮುಕ್ತ ಭಾರತಕ್ಕಾಗಿ ಎಬಿವಿಪಿ ಸಂಕಲ್ಪ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮ ಮಂಗಳವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅವರು ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಜಿ.ಪಂ.ಸದಸ್ಯ ರವೀಂದ್ರ ಕಂಬಳಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು,ತಾಲೂಕು ಕಚೇರಿಗೆ ಆಗಮಿಸಿದ ಸಾರ್ವಜನಿಕರು ತಮ್ಮ ಸಹಿ ಹಾಕುವ ಮೂಲಕ ನಶಾ ಮುಕ್ತ ಭಾರತದ ಎಬಿವಿಪಿಯ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರು.
ಎಬಿವಿಪಿ ಮಂಗಳೂರು ಸಂಘಟನಾ ಕಾರ್ಯದರ್ಶಿ ಬಸವೇಶ್ವರ ಕೋರಿ, ಮಂಗಳೂರು ವಿಭಾಗ ಸಂಚಾಲಕ್ ಅಶೀಶ್ ಅಜ್ಜಿಬೆಟ್ಟು, ತಾಲೂಕು ಸಂಚಾಲಕ್ ಹರ್ಷಿತ್ ಕೊಯಿಲ, ಸಹಸಂಚಾಲಕ್ ದಿನೇಶ್, ನಗರ ಕಾರ್ಯದರ್ಶಿ ಅಖಿಲಾಶ್, ದಿನೇಶ್ ಕೊಯಿಲ, ನಿಶ್ಚಿತ್ ಬಂಟ್ವಾಳ್. ಹಿರಿಯ ಕಾರ್ಯಕರ್ತರಾದ ಪ್ರಣಮ್ ರಾಜ್ ಅಜ್ಜಿಬೆಟ್ಟು,ಮನೀಷ್ ರಾಯಿ ಮೊದಲಾದವರು ಪಾಲ್ಗೊಂಡಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…