ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಗ ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಎಸ್ಕೆಎಸ್ಸೆಸ್ಸೆಫ್ ವಿಖಾಯ ರಕ್ತದಾನಿ ಬಳಗ ಬಂಟ್ವಾಳ ಜಂಟಿ ಆಶ್ರಯದಲ್ಲಿ ಯೆನೆಪೊಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ವಿಖಾಯ ಡೇ ಪ್ರಚಾರಾರ್ಥ, ಮರ್ಹೂಂ ಸಿರಾಜ್ ತಲಪಾಡಿ ಇವರ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ಇಂದು ಬಿ.ಸಿ.ರೋಡ್ ಗೂಡಿನಬಳಿ ಸಮುದಾಯ ಭವನ ಮರ್ಹೂಂ ಲತೀಫ್ ಖಾನ್ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸೈಯದ್ ಅಮೀರ್ ತಂಙಳ್ ದುಅ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ಉದ್ಘಾಟಿಸಿದರು.
ವಿಖಾಯ ಬಂಟ್ವಾಳ ವಲಯ ಚೇರ್ಮಾನ್ ಅಬ್ದುಲ್ ಖಾದರ್ ಮುಸ್ಲಿಯಾರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಅಧ್ಯಕ್ಷ ಅನೀಸ್ ಕೌಸರಿ ವಿಖಾಯ ಮಾಡುವ ಸೇವೆಯ ಕುರಿತು ವಿವರಿಸಿದರು. ವಿಖಾಯ ರಕ್ತದಾನಿ ಬಳಗ ದಕ್ಷಿಷ ಕನ್ನಡ ಜಿಲ್ಲಾ ಉಸ್ತುವಾರಿ ತಾಜುದ್ದೀನ್ ಟರ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಸದಸ್ಯ ಖಾಸಿಂ ದಾರಿಮಿ, ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ ಕೋಶಾಧೀಕಾರಿ ಹನೀಫ್ ದೂಮಳಿಕೆ, ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ ಉಪಾಧ್ಯಕ್ಷ ಸಿದ್ದೀಖ್ ಅಬ್ದುಲ್ ಖಾದರ್ ಬಂಟ್ವಾಳ, ವಿಖಾಯ ದಕ್ಷಿಣ ಕನ್ನಡ ಜಿಲ್ಲೆ ಚೇರ್ಮಾನ್ ಸೈಯದ್ ಇಸ್ಮಾಯೀಲ್ ತಂಙಳ್, ವಿಖಾಯ ದಕ್ಷಿಣ ಕನ್ನಡ ಜಿಲ್ಲೆ ಕನ್ವಿನರ್ ಆಸೀಫ್ ಕಬಕ, ವಿಖಾಯ ದಕ್ಷಿಣ ಕನ್ನಡ ಜಿಲ್ಲೆ ಕೋ ಆರ್ಡಿನೇಟರ್ ಮುಸ್ತಫ ಕಟ್ಟದಪಡ್ಪು, ಜುಮಾ ಮಸೀದಿ ಗೂಡಿನಬಳಿ ಖತೀಬ್ ಶಾಫಿ ಫೈಝಿ ಅಲ್ ಇರ್ಫಾನಿ, ಜುಮಾ ಮಸೀದಿ ಗೂಡಿನಬಳಿ ಅಧ್ಯಕ್ಷ ಅಬ್ದುಲ್ ಮಜೀದ್, ವಿಖಾಯ ರಕ್ತದಾನಿ ಬಳಗ ಮಂಗಳೂರು ವಲಯ ಉಸ್ತುವಾರಿ ನಝೀರ್, ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ, ಎಸ್ಕೆಎಸ್ಸೆಸ್ಸೆಫ್ ಮಿತ್ತಬೈಲ್ ಕ್ಲಸ್ಟರ್ ಅಧ್ಯಕ್ಷ ಅಶ್ರಫ್ ಶಾಂತಿಅಂಗಡಿ, ಎಸ್ಕೆಎಸ್ಸೆಸ್ಸೆಫ್ ಗೂಡಿನಬಳಿ ಶಾಖೆ ಅಧ್ಯಕ್ಷ ಉಬೈದುಲ್ಲಾ ಗೂಡಿನಬಳಿ ಉಪಸ್ಥಿತರಿದ್ದರು.
ಆಂಬುಲೆನ್ಸ್ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆದಂ ಅಲಾಡಿ ಅವರನ್ನು ಸನ್ಮಾನಿಸಲಾಯಿತು. ವಿಖಾಯ ಕೇಂದ್ರ ಸಮಿತಿ ವೈಸ್ ಚೇರ್ಮಾನ್ ಬಶೀರ್ ಮಜಲ್ ಸ್ವಾಗತಿಸಿದರು. ವಿಖಾಯ ರಕ್ತದಾನಿ ಬಳಗ ಬಂಟ್ವಾಳ ವಲಯ ಉಸ್ತುವಾರಿ ಶಾಕೀರ್ ಮಿತ್ತಬೈಲ್ ಧನ್ಯವಾದಗೈದರು. ಸರ್ಗಾಲಯ ಬಂಟ್ವಾಳ ವಲಯ ಕನ್ವಿನರ್ ಖಲಂದರ್ ತುಂಬೆ ನಿರೂಪಿಸಿದರು.