ಪೆರಾಜೆ ಯುವಕ ಮಂಡಲ, ಸೈಲೆಂಟ್ ಫ್ರೆಂಡ್ಸ್ ಬುಡೋಳಿ, ಎನ್.ಎಸ್.ಯು.ಐ. ಘಟಕ ಆಶ್ರಯದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣಾ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಪೆರಾಜೆ ಶಾಲಾ ರಂಗಮಂದಿರದಲ್ಲಿ ಜರುಗಿತು.
ಅಧ್ಯಕ್ಷತೆಯನ್ನು ಪೆರಾಜೆಗುತ್ತು ಶ್ರೀಕಾಂತ ಆಳ್ವಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬುಡೋಳಿಗುತ್ತು ಚಂದ್ರಹಾಸ ಶೆಟ್ಟಿ, ಬುಡೋಳಿ ಅಪ್ರಾಯ ಪೈ, ಶಾಂತಪ್ಪ ಕುಲಾಲ್, ತಾಲೂಕು ಪಂಚಾಯತ್ ಸದಸ್ಯೆ ಮಂಜುಳ ಕುಶಾಲ ಪೆರಾಜೆ, ಸಂಜೀವ ಸಾದಿಕುಕ್ಕು, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕುಶಾಲ ಎಂ.ಪೆರಾಜೆ, ಎನ್ಎಸ್ ಯುಐ ಘಟಕ ಬಂಟ್ವಾಳ ಕಾರ್ಯಕರ್ತ ಫಾರೂಕ್ ಬಾಯಬ್ಬೆ ಮತ್ತು ಬಾತಿಶ್ ಅಳಕೆಮಜಲು ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರದ ಅಂಗವಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಪಾಸಾದ ಪೆರಾಜೆ ಗ್ರಾಮದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಸನ್ಮಾನಿಸಲಾಯಿತು. ನವೋದಯ ಶಾಲೆಗೆ ಆಯ್ಕೆಗೊಂಡ ಚಿನ್ಮಯಿ ಮಂಜೋಟಿ ಅವರನ್ನು ಗುರುತಿಸಿ ಗೌರವಿಸಲಾಯಿತು. ಯುವಕ ಮಂಡಲದ ಅಧ್ಯಕ್ಷ ದೀಪಕ್ ಸುವರ್ಣ ಪೆರಾಜೆ ಸ್ವಾಗತಿಸಿದರು. ಯುವಕ ಮಂಡಲದ ಕಾರ್ಯದರ್ಶಿ ಸಚಿನ್ ಮಂಜೋಟಿ ವಂದನಾರ್ಪಣೆಗೈದರು. ಲಕ್ಷ್ಮೀಶ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲ ಮತ್ತು ಸೈಲೆಂಟ್ ಫ್ರೆಂಡ್ಸ್ ಬುಡೋಳಿ ಬಳಗದ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.