ಬಂಟ್ವಾಳ

ಎಡನೀರು ಶ್ರೀಕೇಶವಾನಂದ ಭಾರತೀ ಸ್ವಾಮೀಜಿ, ಅಳಿಕೆ ಗಂಗಾಧರ ಭಟ್ ಅವರಿಗೆ ಬಿ.ಸಿ.ರೋಡಿನಲ್ಲಿ ಶ್ರದ್ಧಾಂಜಲಿ

ಜಾಹೀರಾತು

 

ಜಾಹೀರಾತು

ಇತ್ತೀಚೆಗೆ ನಿಧನರಾದ ಎಡನೀರು ಮಠದ ಶ್ರೀಕೇಶವಾನಂದ ಭಾರತಿ ಶ್ರೀಗಳು ಹಾಗೂ ಅಳಿಕೆಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ಅಧ್ಯಕ್ಷ ಯು. ಗಂಗಾಧರ ಭಟ್ ಅವರಿಗೆ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಸಂಜೆ ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು.

ಸಂತಾಪ ಸಭೆಯಲ್ಲಿ ದೀಪ ಪ್ರಜ್ವಲಿಸಿ,  ಪುಷ್ಪ ಸಮರ್ಪಿಸಿ ಬಳಿಕ ನುಡಿನಮನ ಸಲ್ಲಿಸಿದ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಎಡನೀರು ಶ್ರೀಗಳು ಕಲೆಗೆ, ಸಾಹಿತ್ಯಕ್ಕೆಅಪಾರವಾದ ಪ್ರೋತ್ಸಾಹ ನೀಡಿದವರು. ಆ ಮೂಲಕ  ಸಾಂಸ್ಕೃತಿಕ ಲೋಕಕ್ಕೆ ವಿಶಿಷ್ಟವಾದ ಪರಂಪರೆಯನ್ನು ಹಾಕಿಕೊಟ್ಟವರು .ಅವರ ಆದರ್ಶ ಕಲಾವಿದರಿಗೆಲ್ಲಾ ಮಾರ್ಗದರ್ಶನವಾಗಲಿ ಎಂದು ಹೇಳಿದರು. ಅಳಿಕೆ ವಿದ್ಯಾಸಂಸ್ಥೆ ತಾಲೂಕಿಗೆ  ಕೀರ್ತಿ ತಂದಿರುವುದು ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೇ ಗುರುತಿಸಿಕೊಂಡಿರುವ ವಿದ್ಯಾಸಂಸ್ಥೆಯಾಗಿದೆ. . ಗಂಗಾಧರ ಭಟ್ ನಮ್ಮೆಲ್ಲರ ಮೇಲಿಟ್ಟ ಪ್ರೀತಿ ಅಗಾಧವಾದುದು ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ನುಡಿ ನಮನ ಸಲ್ಲಿಸಿದರು.  ಅಳಿಕೆ ವಿದ್ಯಾಸಂಸ್ಥೆಯ ಪರವಾಗಿ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ ಭಟ್ ಮಾತನಾಡಿದರು. ಶಂಕರ ಪ್ರತಿಷ್ಠಾನದ ಅಧ್ಯಕ್ಷ  ಕೈಯ್ಯೂರು ನಾರಾಯಣ ಭಟ್, ಯಕ್ಷಗಾನ ಬಯಲಾಟ ಸಪ್ತಾಹ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ, ನೀರ್ಪಾಜೆ ಭೀಮಭಟ್ಟ ಅಭಿಮಾನಿ ಬಳಗದ ಅಧ್ಯಕ್ಷ  ಸುದರ್ಶನ ಜೈನ್, ಬಂಟ್ವಾಳ ಕಸಾಪ ಅಧ್ಯಕ್ಷ ಮೋಹನರಾವ್ ಉಪಸ್ಥಿತರಿದ್ದರು. ಸಾರ್ವಜನಿಕರ ಪರವಾಗಿ ನಿವೃತ್ತ ಪ್ರಾಧ್ಯಪಕ ಪ್ರೊ. ರಾಜಮಣಿ ರಾಮಕುಂಜ, ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ, ಕಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ  ನುಡಿನಮನ ಸಲ್ಲಿಸಿದರು. ಶಂಕರ ಪ್ರತಿಷ್ಠಾನ ಕೆಯ್ಯೂರು, ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ, ನೀರ್ಪಾಜೆ ಭೀಮ‌ಭಟ್ಟ ಅಭಿಮಾನಿ ಬಳಗ, ಯಕ್ಷಗಾನ ಬಯಲಾಟ ಸಪ್ತಾಹ ಸಮಿತಿ ಜಂಟಿ ಆಶ್ರಯದಲ್ಲಿ ಶ್ರದ್ದಾಂಜಲಿ ಸಭೆ ಸಂಘಟಿಸಲಾಗಿತ್ತು.

ಜಾಹೀರಾತು

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ