ಕಲ್ಲಡ್ಕ

ವಿದ್ಯಾಭಾರತಿಯಿಂದ ಅಖಿಲ ಭಾರತ ಶಿಕ್ಷಾ ಸಂಸ್ಥಾನ್ – ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನ

 

ಜಾಹೀರಾತು

ಬಂಟ್ವಾಳ: ಭಾರತ ಸರಕಾರದಿಂದ ಇತ್ತೀಚೆಗೆ ಅಂಗೀಕರಿಸಲ್ಪಟ್ಟಿರುವ ನೂತನರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿ ಜನಜಾಗೃತಿ ಮೂಡಿಸುವ ಸಲುವಾಗಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನವನ್ನು ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿ ಚರ್ಚೆ, ಸಂವಾದ, ಉಪನ್ಯಾಸ ಮುಂತಾದ ಕಾರ್ಯಕ್ರಮಗಳ ಜೊತೆಗೆ ರಾಷ್ಟ್ರೀಯ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ ಎಂದು ವಿದ್ಯಾಭಾರತಿ ಪ್ರಾಂತೀಯ ಕಾರ್ಯದರ್ಶಿ ವಸಂತ ಮಾಧವ ತಿಳಿಸಿದ್ದಾರೆ.

ನೂತನ ಶಿಕ್ಷಣ ನೀತಿಯ ವಿವಿಧತಾತ್ವಿಕ ಆಯಾಮಗಳು ಜನಸಾಮಾನ್ಯರಲ್ಲಿ, ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಣಾಸಕ್ತರಲ್ಲಿ ಚರ್ಚೆಯಾಗಿ ಕಾರ್ಯಾನ್ವಯನವಾಗಬೇಕೆಂಬ ದೃಷ್ಟಿಯಿಂದ ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಸೆಪ್ಟೆಂಬರ್ 25ರಿಂದ ಅಕ್ಟೋಬರ್ 2ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈ ಸ್ಪರ್ಧೆಗಳು ಭಾರತಕೇಂದ್ರಿತ ಶಿಕ್ಷಣ – ಸಮಗ್ರದೃಷ್ಟಿಯ ಶಿಕ್ಷಣ – ಜ್ಞಾನಾಧಾರಿತ ಸಮುದಾಯ ಮತ್ತುಗುಣಮಟ್ಟದ ಶಿಕ್ಷಣ ಈ ನಾಲ್ಕು ಪ್ರಮುಖತಾತ್ವಿಕ ಪರಿಕಲ್ಪನೆಗಳನ್ನು ಒಳಗೊಂಡು ನಡೆಯಲಿದೆ.ದೇಶದ 13 ಬೇರೆ ಬೇರೆ ಭಾಷೆಗಳಲ್ಲಿ  ಮೂರುರೀತಿಯ ಗುಂಪುಗಳಲ್ಲಿ ನಡೆಯುತ್ತಿದೆ. (9ರಿಂದ12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ನಾಗರಿಕರಿಗೆ) ಎಲ್ಲಾ ವಿಜೇತರಿಗೆ ನಗದು ಬಹುಮಾನವನ್ನು ಮತ್ತು ಪ್ರಮಾಣ ಪತ್ರವನ್ನು ಹಾಗೂ ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರವನ್ನು ಒದಗಿಸಲಾಗುತ್ತದೆ. ಚಿತ್ರಕಲೆ, ಕಾರ್ಟೂನ್‌ರಚನೆ, ಪ್ರಧಾನಮಂತ್ರಿಯವರಿಗೆ ಪತ್ರ, 2 ನಿಮಿಷದ ಭಾಷಣ, ಪ್ರಬಂಧ ಸ್ಪರ್ಧೆ, 2.20 ನಿಮಿಷದಕಿರುಚಿತ್ರದ ನಿರ್ಮಾಣ, ಡಿಜಿಟಲ್‌ಡಿಸೈನಿಂಗ್ ಹಾಗೂ 8 ಟ್ವಿಟರ್‌ತ್ರೆಡ್  ಅಲ್ಲದೆರಸಪ್ರಶ್ನೆ  ಸ್ಪರ್ಧೆಗಳನ್ನು ಈ ವಿವಿಧ ಗುಂಪುಗಳಿಗೆ 13 ಭಾಷೆಗಳಲ್ಲಿ ಆಯೋಜಿಸಲಾಗುವುದು.

11 ಸೆಪ್ಟೆಂಬರ್ 2020ಕ್ಕೆ ಬಿಡುಗಡೆಯಾಗುವ www.mynep.in ಎಂಬ ವೆಬ್‌ಸೈಟ್‌ನ ಮೂಲಕ ಸ್ಪರ್ಧೆಗಳಿಗೆ ಹೆಸರು ನೊಂದಾಯಿಸಿ ಸೂಚಿಸಿದ ನಿಯಮಗಳಿಗೆ ಅನುಸಾರವಾಗಿತಮ್ಮತಮ್ಮ ಸಾಮಾಜಿಕ ಜಾಲತಾಣಗಳ ಮುಖಾಂತರಎಲ್ಲಾ ಸ್ಪರ್ಧೆಗಳಿಗೆ ಭಾಗವಹಿಸಬಹುದು. ತಮ್ಮ ವಿಭಾಗ ವಿಷಯವಾರು ಸ್ಪರ್ಧೆಗಳನ್ನು ಆಯ್ಕೆಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿದ್ಯಾಭಾರತಿ ಕರೆ ನೀಡಿದೆ.

ಈ ನೂತನರಾಷ್ಟ್ರೀಯ ಶಿಕ್ಷಣ ನೀತಿಯು ಒಂದು ವಿಶೇಷ ರೀತಿಯಲ್ಲಿಜನರ ಹಾಗೂ ಸಾಮಾಜಿಕ ಸಂಘಟನೆಗಳ ವಿವಿಧ ಹಂತದಚರ್ಚೆ ಹಾಗೂ ಸಲಹೆಗಳ ಪರಿಣಾಮವಾಗಿರಚನೆಯಾಗಿದ್ದು,ಇದರ ಬಗ್ಗೆ ಯುವಚೈತನ್ಯಪೂರ್ಣ ಸ್ವಯಂಸೇವಕರ ಮೂಲಕ ಸಾರ್ವಜನಿಕ ಜನಜಾಗೃತಿ ನಡೆಯಬೇಕಾಗಿದೆ.  ಜನಜಾಗೃತಿಯ ಕಾರ್ಯಕ್ರಮಗಳ ನಿರ್ವಹಣೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ರಾಯಭಾರಿಗಳನ್ನು ಗುರುತಿಸಿ ನಿಯುಕ್ತಿಗೊಳಿಸಲಾಗುವುದು. ಇದಲ್ಲದೆ, ಶಾಲೆ, ಕಾಲೇಜುಗಳು, ಉನ್ನತ ಶಿಕ್ಷಣದ ವಿದ್ಯಾಕೇಂದ್ರಗಳು ಸಹ ಈ ಅಭಿಯಾನದಲ್ಲಿ ಕೈಜೋಡಿಸಿ ಈ ಶಿಕ್ಷಣ ನೀತಿಯನ್ನು ಬೆಂಬಲಿಸಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಸಂಕಲ್ಪದಲ್ಲಿ ಭಾಗವಹಿಸಲು ವಿದ್ಯಾಭಾರತಿ ಕರ್ನಾಟಕದ ಪರವಾಗಿ ಪ್ರಾಂತೀಯ ಕಾರ್ಯದರ್ಶಿ ವಸಂತ ಮಾಧವ ತಿಳಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.