ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ನಿಂದ ತಾಲೂಕಿನ ಹಲವು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗಳಿಗೆ ಫೇಸ್ ಮಾಸ್ಕ್ ವಿತರಿಸಲಾಯಿತು. ಬಂಟ್ವಾಳ, ಬೆಂಜನಪದವು, ಬಾಳ್ತಿಲ, ಮಂಚಿ ಆರೋಗ್ಯಕೇಂದ್ರಗಳ ಆರೋಗ್ಯಾಧಿಕಾರಿ, ಸಿಬ್ಬಂದಿವರ್ಗ, ಆಶಾಕಾರ್ಯಕ್ರತೆಯರಿಗೆ ಫೇಸ್ ಮಾಸ್ಕ್ ವಿತರಣೆಯನ್ನು ಅಧ್ಯಕ್ಷ ಪದ್ಮನಾಭ ರೈ ನೇತೃತ್ವದಲ್ಲಿ ನಡೆಸಲಾಯಿತು. ತಾಲೂಕು ಸಾರ್ವಜನಿಕ ಆಸ್ಪತ್ರೆ ಬಂಟ್ವಾಳದ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ ಎನ್, ರೋಟರಿ ಟೌನ್ ಪ್ರಮುಖರಾದ ಚಂದ್ರಹಾಸ್ ಶೆಟ್ಟಿ, ಗಾಯತ್ರಿ ಲೋಕೇಶ್, ಆಶಾಮಣಿ ಡಿ ರೈ, ಸುಜಾತ ಪಿ ರೈ, ಆಲ್ಬರ್ಟ್ ಮೆನೆಜಸ್, ಕಿಶೋರ್, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಗಣೇಶ್ ಶೆಟ್ಟಿ ಗೋಳ್ತಮಜಲು, ರಾಜೇಶ್, ಸುಧೀರ್ ಶೆಟ್ಟಿ, ಕೇಶವ ನಾಯ್ಕ್, ಜ್ಯೋತಿಂದ್ರ ಶೆಟ್ಟಿ, ದಯಾನಂದ ಶೆಟ್ಟಿ, ಸತೀಶ್ ಕುಮಾರ್, ಗಣೇಶ್ ಸುವರ್ಣ, ಪ್ರಶಾಂತ್ ಕಾರಂತ್, ಸುಂದರ್ ಬಂಗೇರ, ರಮೇಶ್ ನೆಟ್ಲ, ದಿವಾಕರ್ ಶೆಟ್ಟಿ ಈ ವೇಳೆ ಇದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…