ಬಿ.ಸಿ.ರೋಡ್ ಸಮೀಪ ಬಿ.ಮೂಡ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಗಾಂಜಾ ದಾಸ್ತನಿಟ್ಟಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈತನಿಂದ ಸುಮಾರು 39 ಕೆ ಜಿ 948 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅಹಮದ್ ಸಾಬೀತ್ ಎಂಬಾತ ಈ ಆರೋಪದಲ್ಲಿ ಪೊಲೀಸ್ ವಶದಲ್ಲಿರುವಾತ. ಮತ್ತೋರ್ವ ಪರಾರಿಯಾಗಿದ್ದಾನೆ. ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಮಂಗಳವಾರ ಮಧ್ಯಾಹ್ನ ಈ ದಾಳಿ ನಡೆದಿದೆ. ಮನೆಯಲ್ಲಿ ಎರಡು ಪಾಲಿಥೀನ್ ಚೀಲಗಳಲ್ಲಿ ಮಾದಕ ಗಾಂಜ ಗಿಡದ ಮೊಗ್ಗು, ಎಲೆ , ಕಡ್ಡಿಗಳು ಇದ್ದು ಅವು ಅರೆ ಒಣಗಿದ್ದು ಸೇರಿದಂತೆ ರೂ.19,97,400 ಮೌಲ್ಯದ ಒಟ್ಟು ತೂಕ 39 ಕೆ ಜಿ 948 ಗ್ರಾಮ್ ಗಾಂಜಾ ಪತ್ತೆಯಾಗಿದೆ. ಎಸ್.ಐ.ಅವಿನಾಶ್ ದಾಳಿ ನಡೆಸಿದ್ದು, ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಮಾರ್ಗದರ್ಶನ ನೀಡಿದ್ದರು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಠಾಣಾ ವ್ಯಾಪ್ತಿಯಲ್ಲೂ ಗಾಂಜಾ ಸೇವನೆ ಮತ್ತು ಗಾಂಜಾ ಹೊಂದಿದ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…