ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾನಿಧಿ ಹಸ್ತಾಂತರ ಕಾರ್ಯಕ್ರಮ ಸೆ.6ರಂದು ಬಿ.ಸಿ.ರೋಡಿನ ಯುವವಾಹಿನಿ ಭವನದಲ್ಲಿ ನಡೆಯಿತು.
ಘಟಕದ 2019-20 ನೇ ಸಾಲಿನ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಇಂದಿರೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯದರ್ಶಿ ಪುರುಷೋತ್ತಮ ಕಾಯರ್ ಪಲ್ಕೆ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಗಣೇಶ್ ಪೂಂಜರೆಕೋಡಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಘಟಕದ 2020-21 ನೇ ಸಾಲಿನ 21 ಸದಸ್ಯರ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಮಾಜಿ ಅಧ್ಯಕ್ಷರಾದ ಶಿವಾನಂದ ಎಂ ಸಭೆಯಲ್ಲಿ ಪ್ರಕಟಿಸಿದರು.
ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾನಿಧಿ ಹಸ್ತಾಂತರ: ಈ ಸಾಲಿನ ಈ ಕೆಳಗಿನ ಪಿಯುಸಿ ಶೈಕ್ಷಣಿಕ ಸಾಧಕರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಉಷಾ ಕಿರಣ್ ಎಮ್.ಜೆ(96.17%) , ನವ್ಯಾ (95%), ಭೂಮಿಕಾ (94.83%), ಅಕ್ಷಯ್ ಪೂಜಾರಿ ದಾಳಿಂಬ (94.6%), ಬೃಜೇಶ್ ಕುಮಾರ್ (94.5 %), ಕೃಷ್ಣ ಕಿರಣ್ (94%) , ಸ್ನೇಹಾ ಎಸ್. ಅಮ್ಡೇಲ್ (93.6%), ಸಹನಾ ಜೆ.ಪಿ (93.51%), ಸಾಯಿ ನೇಹಾ (93%), ಗ್ರೀಷ್ಮಾ (93%), ವೃಕ್ಷಿತಾ (92.2%) ಅರ್ಪಿತಾ ಆರ್, (92%), ಸುದರ್ಶನ್ ಟಿ (92.16%), ದೀಕ್ಷಾ ( 91.5%) ಅನಿತ್ ಕುಮಾರ್ (91.2%), ರಚನಾ (91%), ತಿಲಕ್ ರಾಜ್ (90.33%), ಹರ್ಷಿತಾ ಇವರಿಗೆ ಈ ಸಂದರ್ಭದಲ್ಲಿ 18 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಹಸ್ತಾಂತರಿಸಲಾಯಿತು
ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಲೋಕೇಶ್ ಪೂಜಾರಿ ಅಲೆತ್ತೂರು ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು, ಸಲಹೆಗಾರರಾದ ಅಣ್ಣು ಪೂಜಾರಿ, ಪ್ರೇಮನಾಥ್ ಕೆ ಹಾಗೂ ಉಪಾಧ್ಯಕ್ಷರಾದ ಸುಂದರ ಪೂಜಾರಿ ಬೊಳಂಗಡಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ಬಿ.ಶ್ರೀಧರ ಅಮೀನ್ ಸ್ವಾಗತಿಸಿದರು. ಕಾರ್ಯದರ್ಶಿ ಪುರುಷೋತ್ತಮ ಕಾಯರ್ ಪಲ್ಕೆ ಧನ್ಯವಾದ ನೀಡಿದರು. ಯತೀಶ್ ಕಾರ್ಯಕ್ರಮ ನಿರ್ವಹಿಸಿದರು