ಬಂಟ್ವಾಳ

ಸಂಗಬೆಟ್ಟು ಜಿಪಂ ವ್ಯಾಪ್ತಿಯಲ್ಲಿ 100 ಕೋಟಿಗೂ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಕಳೆದ ಒಂದುವರ್ಷದ ಅವಧಿಯಲ್ಲಿ  ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸಂಗಬೆಟ್ಟು ಜಿಪಂ ವ್ಯಾಪ್ತಿಯಲ್ಲಿ ಸುಮಾರು 100 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಪ್ಠಾನಗೊಳಿಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.

ರಾಜ್ಯ ರಸ್ತೆ ನಿಧಿಯಿಂದ 13 ಕೋ.ರೂ.ವೆಚ್ಚದಲ್ಲಿ  ತಾಲೂಕಿನ ಸೊರ್ನಾಡ್ ನಿಂದ  ಪುಚ್ಚಮೊಗರು ತನಕ  ರಸ್ತೆ ಅಗಲೀಕರಣ ಸೇರಿದಂತೆ ಮರು ಡಾಮರೀಕರಣ 50 ಲಕ್ಷ ರೂ. ವೆಚ್ಚದಲ್ಲಿ ಸಿದ್ದಕಟ್ಟೆ – ಮಂಚಕಲ್ಲು ರಸ್ತೆ ಅಗಲೀಕರಣ ಮತ್ತು ಮರು ಡಾಮರಿಕರಣ ಹಾಗೂ 3 ಕೋ.ರೂ.ವೆಚ್ಚದಲ್ಲಿಬಂಡಸಾಲೆಯಿಂದ-ಎಣಿಲಕೋಡಿ-ಪಂಜಿಕಲ್ಲುಪದವು-ಆಚಾರಿಪಲ್ಕೆ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕರು ಸೋಮವಾರ ಸಿದ್ದಕಟ್ಟೆಯಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಕೊರೋನದಂಥ ಮಹಾಮಾರಿ ಆವರಿಸಿರುವ ಸಂದರ್ಭದಲ್ಲಿಯೂ ಬಂಟ್ವಾಳ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಯ ಕಾರ್ಯ ಮುಂಚೂಣಿಯಲ್ಲಿದೆ,ಇದಕ್ಕೆ ಪೂರಕವಾಗಿ ರಾಜ್ಯ ಮತ್ತು ಕೇಂದ್ರ ಸರಕಾರವು ಅನುದಾನವನ್ನು ಬಿಡುಗಡೆಗೊಳಿಸಿ ಸಹಕಾರ ನೀಡುತ್ತಿದೆ ಎಂದ ಶಾಸಕರು ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಯನ್ನು ರೂಪಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ, ತಾ.ಪಂ. ಸದಸ್ಯ,ಪ್ರಭಾಕರ ಪ್ರಭು, ತಾಪಂ ಮಾಜಿ ಸದಸ್ಯ ರತ್ನಕುಮಾರ್ ಚೌಟ, ಸಂಗಬೆಟ್ಟು ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷ  ಸತೀಶ್ ಪೂಜಾರಿ, ನಿಕಟಪೂರ್ವ ಸದಸ್ಯರಾದ ಎಸ್.ಪಿ.ಶ್ರೀಧರ್, ಮಾದವ ಶೆಟ್ಟಿಗಾರ್, ಸುರೇಶ್ ಕುಲಾಲ್, ವಿಮಲ ಮೋಹನ್, ಪ್ರಮುಖರಾದ ಸಂದೇಶ ಶೆಟ್ಟಿ ಪೊಡುಂಬ,ರಾಜೇಶ್ ಶೆಟ್ಟಿ ಕೊನೆರೊಟ್ಟು, ಉಮೇಶ್ ಗೌಡ ಮಂಚಕಲ್ಲು, ಪುರುಷೊತ್ತಮ ಶೆಟ್ಟಿ ವಾಮದಪದವು, ನವೀನ ಪೂಜಾರಿ ಕರ್ಪೆ, ವಸಂತ ಕುಮಾರ್ ಅಣ್ಣಳಿಕೆ, ದಿನೇಶ್ ಶೆಟ್ಟಿ ದಂಬೆದಾರ್, ಬೋಜ ಶೆಟ್ಟಿಗಾರ್, ರಶ್ಮಿತ್ ಶೆಟ್ಟಿ ಕೈತ್ರೋಡಿ, ಸಂತೋಷ ರಾಯಿಬೆಟ್ಟು, ರಮನಾಥ ರಾಯಿ, ಸೀತಾರಾಮ ಪೂಜಾರಿ, ಡೊಂಬಯ ಅರಳ, ಸಂಜೀವ ಪೂಜಾರಿ ಪಿಲಿಂಗಾಲು, ಪ್ರಕಾಶ್ ಅಂಚನ್, ಗಣೇಶ್ ರೈ ಮಾಣಿ, ನಂದಕುಮಾರ್ ರೈ,ಮಂದಾರತಿ ಶೆಟ್ಟಿ, ಪರಮೇಶ್ವರ ಪೂಜಾರಿ ರಾಯಿ, ರಾಜೇಂದ್ರ ಪೂಜಾರಿ ಕರ್ಪೆ, ನವೀನ ಹೆಗ್ಡೆ, ಲಿಂಗಪ್ಪ ಪೂಜಾರಿ ಹಲಾಯಿ, ಯೋಗೀಶ್ ಆಚಾರ್ಯ ಕುಕ್ಕಿಪಾಡಿ, ಸಿದ್ದಕಟ್ಟೆ ಹಾ.ಉ. ಸಂಘದ ಅದ್ಯಕ್ಷ ಸದಾಶಿವ ಪೂವಳ ಕರ್ಪೆ, ಜಯರಾಮ ಅಡಪ ಕಣಿಯೂರು, ಯಶವಂತ ನಗ್ರಿ, ಯಶೋಧರ ಕರ್ಬೆಟ್ಟು, ಲೋಕೋಪಯೋಗಿ ಇಲಾಖೆಯ ಸ.ಕಾ.ನಿ.ಇಂಜಿನಿಯರ್ ಷಣ್ಮುಗಂ, ಇಂಜಿನಿಯರ್ ಗಳಾದ ಅರುಣ್ ಪ್ರಕಾಶ್, ಅಮೃತಕುಮಾರ್, ಲಕ್ಷ್ಮೀನಾರಾಯಣ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts