16 ಕೋಟಿ 50 ಲಕ್ಷ ವೆಚ್ಚದಲ್ಲಿ ಬಂಟ್ವಾಳ ಮೂಡಬಿದ್ರಿ ಲೋಕೋಪಯೋಗಿ ರಸ್ತೆಯ ಸೊರ್ನಾಡ್ ನಿಂದ ಪುಚ್ಚಮೊಗರು ತನಕ ರಸ್ತೆ ಅಗಲೀಕರಣ ಸೇರಿದಂತೆ ಮರು ಡಾಮರೀಕರಣ ಕಾಮಗಾರಿಗೆ ನಾಳೆ.ಸೆ.7ರಂದು ಸೋಮವಾರ ಬೆಳಿಗ್ಗೆ ಸಿದ್ದಕಟ್ಟೆಯಲ್ಲಿ ಗುದ್ದಲಿ ಪೂಜೆ ನಡೆಯಲಿದೆ. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಸೇರಿದಂತೆ ಅನೇಕ ಪ್ರಮುಖರು,ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ಮೂಡಬಿದ್ರಿ ಲೋಕೋಪಯೋಗಿ ರಸ್ತೆಯ ಸೊರ್ನಾಡ್ ನಿಂದ ಪುಚ್ಚಮೊಗರು ತನಕ ರಸ್ತೆ ಅಗಲೀಕರಣ ಸೇರಿದಂತೆ ಮರು ಡಾಮರೀಕರಣ ಕಾಮಗಾರಿಗೆ ರಾಜ್ಯ ಸರ್ಕಾರದ ರಾಜ್ಯ ರಸ್ತೆ ನಿಧಿಯ ಮೂಲಕ ಸುಮಾರು 13 ಕೋಟಿ ರೂ ಅನುದಾನವನ್ನು ಹಾಗೂ ಸಿದ್ದಕಟ್ಟೆಯಿಂದ ಮಂಚಕಲ್ಲಿನ ತನಕ ಅಗಲೀಕರಣಕ್ಕೆ ಹಾಗೂ ಮರು ಡಾಮರಿಕರಣಕ್ಕೆ ಸುಮಾರು 50 ಲಕ್ಷ ರೂ,ಬಂಡಸಾಲೆಯಿಂದ-ಎಣಿಲಕೋಡಿ-ಪಂಜಿಕಲ್ಲುಪದವು-ಆಚಾರಿಪಲ್ಕೆ ರಸ್ತೆಗೆ 3 ಕೋಟಿ ರೂಪಾಯಿ ಶಾಸಕರ ಅನುದಾನದಲ್ಲಿ ಬಿಡುಗಡೆಯಾಗಿದೆ. ಈ ಎಲ್ಲಾ ಕಾಮಗಾರಿಗೆ ಸೆ
07 ರಂದು ಸೋಮವಾರ (ನಾಳೆ) ಬೆಳೆಗ್ಗೆ 10 ಗಂಟೆಗೆ ಸಿದ್ದಕಟ್ಟೆ ಜಂಕ್ಸನ್ ನಲ್ಲಿ ಗುದ್ದಲಿ ಪೂಜೆ ನಡೆಯಲಿದೆ. ಬಳಿಕ 11 ಗಂಟೆಗೆ ಬಂಡಸಾಲೆಯಿಂದ-ಎಣಿಲಕೋಡಿ ರಸ್ತೆಗೆ ಗುದ್ದಲಿ ಪೂಜೆಯ ನಡೆಯಲಿದೆ ಎಂದು ತಾಪಂ ಸದಸ್ಯ ಪ್ರಭಾಕರ ಪ್ರಭು ಮಾಹಿತಿ ನೀಡಿದ್ದಾರೆ.