ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಮೇಲಿಂದ ಸುಮಾರು 70 ಅಡಿ ಆಳಕ್ಕೆ ಉರುಳಿದ ಘಟನೆ ನಡೆದಿದ್ದು, ಪ್ರಯಾಣಿಕರು ಪವಾಡಸದೃಶವಾಗಿ ಪಾರಾಗಿದ್ದಾರೆ. ಕಾರು ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು- ಹೆಗ್ಗಣಗುಳಿ ರಸ್ತೆಯಲ್ಲಿ ಕಾರೊಂದು ಸುಮಾರು 70 ಆಡಿ ಅಳದಲ್ಲಿರುವ ನೀರು ಹರಿಯುವ ತೋಡಿಗೆ ಬಿತ್ತು. ಚಾಲಕ ಸಹಿತ ಮೂವರು ಸಣ್ಣಪುಟ್ಟ ಗಾಯದ ಅಪಾಯದಿಂದ ಪಾರಾದರು. ಅಜಿಲಮೊಗರು ಕಡೆಯಿಂದ ಬಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆಳಕ್ಕೆ ರಸ್ತೆ ಮೇಲಿಂದ ಬಾಳೆಗಿಡದ ಪೊದೆಯಲ್ಲಿ ಜಾರಿಕೊಂಡು ತೋಡಿಗೆ ಉರುಳಿ ಕಾರಿನ ಚಕ್ರ ಮೇಲ್ಮಖವಾಗಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ, ಘಟನೆಯಿಂದ ಕಾರಿನಲ್ಲಿದ್ದ ಯುವಕರಿಬ್ಬರ ಸಹಿತ ಚಾಲಕ ಸಣ್ಣ ಪುಟ್ಟಗಾಯಗೊಂಡು ಪವಾಡಸದೃಶವಾಗಿ ಅಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಕುತೂಹಲಿಗರು ಜಮಾಯಿಸಿದ್ದು, ಬಳಿಕ ಕ್ರೇನ್ ಮೂಲಕ ಕಾರನ್ನು ಮೇಲಕ್ಕೆತ್ತಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…