ಬಂಟ್ವಾಳ: ಬಿಜೆಪಿಯ ಅಮ್ಟೂರು ಗ್ರಾಮದ ಬೂತ್ ಸಮಿತಿ ವತಿಯಿಂದ ಗ್ರಾಮದ ಹಿರಿಯ ಬಿಜೆಪಿ ನಾಯಕಿ ವಿಶಾಲ ಡಿ.ಶೆಟ್ಟಿ ಬಾಳಿಕೆ ಅವರನ್ನು ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಸನ್ಮಾನಿಸಿದರು. ಕಳೆದ ಕೆಲವು ವರ್ಷಗಳಿಂದ ಅಮ್ಟೂರು ಗ್ರಾಮದಲ್ಲಿ ಹಲವು ಹಿರಿಯರಾದ ಪುಂಡಲಿಕ ಪ್ರಭು, ರಮೇಶ್ ಶೆಟ್ಟಿಗಾರ್ ಕರಿಂಗಾಣ, ಸಂಜೀವ ಪೂಜಾರಿ, ಸೀತಾರಾಮ ಶೆಟ್ಟಿ ಲಕ್ಷ್ಮಿ ಪ್ರಭು ಇವರೊಂದಿಗೆ ಸೇರಿ ಪಕ್ಷ ಸಂಘಟನೆ ಮಾಡಿಕೊಂಡು ಪಂಚಾಯತ್ ಸದಸ್ಯರನ್ನು ಗೆಲ್ಲಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವ ಅವರು, ಅಮ್ಟೂರು ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅನುದಾನದಲ್ಲಿ ಹಾಗೂ ತಾಪಂ, ಜಿಪಂ ಸದಸ್ಯರ ಅನುದಾನದಿಂದ ಕಾಂಕ್ರಿಟೀಕರಣ ಆಗುವ ಸಂದರ್ಭ ಒಂದು ತಿಂಗಳಿಂದ ನೀರನ್ನು ಕೊಟ್ಟು ಸಹಕರಿಸಿ ನಿಸ್ವಾರ್ಥ ಸೇವೆ ಮಾಡಿದ್ದಾರೆ ಎಂದು ದಿನೇಶ್ ಅಮ್ಟೂರು ಹೇಳಿದರು. ಪರಿಶಿಷ್ಟ ಜಾತಿ ಕಾಲೊನಿ ಶಾಂತಿ ಪಳಿಕೆ ರಸ್ತೆಗೆ ಸಹಕರಿಸಿದ ಗ್ರಾಮಸ್ಥರಿಗೂ ಅಭಿನಂದನೆಯನ್ನು ತಿಳಿಸಿದರು ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಬೈದರಡ್ಕ ಶಾಲು ಹೊದಿಸಿ ಸನ್ಮಾನಿಸಿದರು ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಶೆಟ್ಟಿಗಾರ್, ಹಿರಿಯರಾದ ಕಾಂತಪ್ಪ ಶೆಟ್ಟಿ ಬಾಳಿಕೆ, ಪುರುಷೋತ್ತಮ ಟೈಲರ್, ಹರೀಶ್ ಭಟ್ಟಹಿತ್ಲು, ರತಿನ್ ಕುಮಾರ್, ವಿಖ್ಯಾತ್ ಶೆಟ್ಟಿ ಬಾಳಿಕೆ ಉಪಸ್ಥಿತರಿದ್ದರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…