ಜಿಲ್ಲಾ ಸುದ್ದಿ

ಮರುಜೀವ ಪಡೆದ ಸರ್ಕಾರಿ ಶಾಲೆಗಳು, ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಏರಿಕೆ

ಜಾಹೀರಾತು

ಬಂಟ್ವಾಳ ತಾಲೂಕಿನ ಕೆಲ ಸರ್ಕಾರಿ ಶಾಲೆಗಳಲ್ಲೀಗ ಆಶಾದಾಯಕ ಬೆಳವಣಿಗೆ. ಮಕ್ಕಳ ದಾಖಲಾತಿ ಗಣನೀಯವಾಗಿ ಈ ಶಾಲೆಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗುತ್ತಿದೆ.

ದಡ್ಡಲಕಾಡು ಸರ್ಕಾರಿ ಶಾಲೆಗೆ ವರ್ಷ ದಾಖಲೆಯ 273 ಮಕ್ಕಳು ಸೇರ್ಪಡೆಯಾದರೆ, ಕಲ್ಲಡ್ಕದಲ್ಲಿರುವ ಸರ್ಕಾರಿ ಶಾಲೆಗೆ 100 ಮಕ್ಕಳು ಬಂದಿದ್ದಾರೆ. ದಡ್ಡಲಕಾಡು ಶಾಲೆಗೆ 2ರಿಂದ 8ನೇ ತರಗತಿವರೆಗೆ 135 ಮಕ್ಕಳು ಸೇರ್ಪಡೆಗೊಂಡರೆ, 1ನೇ ತರಗತಿಗೆ 104 ಮಕ್ಕಳು ಸೇರ್ಪಡೆಯಾಗಿದೆ. 9ನೇ ತರಗತಿ ಇಲ್ಲಿ ಹೊಸದಾಗಿ ಆರಂಭಗೊಂಡಿದ್ದು, 34 ಮಂದಿ ಸೇರಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಶಾಲೆ ಮುಚ್ಚುವ ಹಂತಕ್ಕೆ ಬಂದಿತ್ತು.

ಕಲ್ಲಡ್ಕ ಪೇಟೆಯಲ್ಲೇ ಇರುವ ..ಜಿಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಷ 1ನೇ ತರಗತಿಗೆ 65 ಮಕ್ಕಳು ಸೇರಿದರೆ, 2ರಿಂದ 8ನೇ ತರಗತಿವರೆಗೆ 35 ಮಕ್ಕಳ ಸೇರ್ಪಡೆಯಾಗಿದೆ. ಇದೇ ಶಾಲೆಯಲ್ಲಿ ಮೂರು ವರ್ಷಗಳ ಹಿಂದೆ ಸೇರ್ಪಡೆಯಾದದ್ದು 9 ಮಕ್ಕಳು. ಎರಡು ವರ್ಷಗಳ ಹಿಂದೆ 23, ಕಳೆದ ವರ್ಷ ಒಂದನೇ ತರಗತಿಗೆ 37 ದಾಟಿತ್ತು. ಒಟ್ಟಾರೆಯಾಗಿ ದಡ್ಡಲಕಾಡು ಶಾಲೆಗೆ 273 ಮತ್ತು ಕಲ್ಲಡ್ಕ ಶಾಲೆಗೆ 100 ಮಕ್ಕಳು ಸೇರಿದಂತಾಗಿದೆ. ಇನ್ನು ಉಳಿದ ಸರ್ಕಾರಿ ಶಾಲೆಗಳೂ ದಾಖಲಾತಿಯಲ್ಲಿ ಹಿಂದೆ ಬಿದ್ದಿಲ್ಲ. ಜೀವನಶೈಲಿಯ ಬದಲಾವಣೆ, ಆದಾಯದ ಹೊಂದಾಣಿಕೆಯಷ್ಟೇ ಇದಕ್ಕೆ ಕಾರಣವಲ್ಲ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಕಾ ಶಿಕ್ಷಣವನ್ನು ನುರಿತ ಬೋಧಕವೃಂದದಿಂದ ಒದಗಿಸುವುದು ಪ್ರಧಾನ ಆಕರ್ಷಣೆ ಎನ್ನಲಾಗುತ್ತಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts