ಬಂಟ್ವಾಳ: ತುಂಬೆ ಗ್ರಾಮದ ಮಾಣೂರು ಎಂಬಲ್ಲಿ ಹಿದಾಯ ಫೌಂಡೇಶನ್, ಎಂ. ಫ್ರೆಂಡ್ಸ್ ಮಂಗಳೂರು ಮತ್ತು ಇರ್ಷಾದುಲ್ ಇಸ್ಲಾಮ್ ಮದರಸ ಮಾಣೂರು ಇದರ ಅಹಯೋಗದೊಂದಿಗೆ ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನವು ಸೆ. 9 ರಂದು ಮಾಣೂರು ಇರ್ಷಾದುಲ್ ಇಸ್ಲಾಂ ಮದರಸದಲ್ಲಿ ಬೆಳಗ್ಗೆ 8:00 ರಿಂದ ಸಂಜೆ 4:00 ರತನಕ ಯಾವುದೇ ಶುಲ್ಕ ಪಡೆಯದೆ ಉಚಿತವಾಗಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಹಿದಾಯ ಫೌಂಡೇಶನ್ ಮತ್ತು ಎಂ. ಫ್ರೆಂಡ್ಸ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಉದ್ಘಾಟಿಸಲಿದ್ದಾರೆ. ನಂತರ ನಿಗದಿಪಡಿಸಿದ ದಿನಾಂಕದಂದು ಆಯುಷ್ಮಾನ್ ಕಾರ್ಡ್ ವಿತರಿಸಲಿದೆ.
ಸೂಚನೆ: ನೊಂದಣಿಗೆ ಆಧಾರ್ ಮತ್ತು ರೇಶನ್ ಕಾರ್ಡ್ ತರತಕ್ಕದ್ದು. ಬೆಳಗ್ಗೆ 8:00 ಗಂಟೆಯಿಂದ ಟೋಕನ್ ನೀಡಲಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ, ಕುಟುಂಬದ ಎಲ್ಲಾ ಸದಸ್ಯರು ಪ್ರತ್ಯೇಕ-ಪ್ರತ್ಯೇಕ ನೊಂದಾವಣೆ ಮಾಡಿಕೊಳ್ಳತಕ್ಕದ್ದು. ಐದು ವರ್ಷದ ಕೆಳಗಿನವರಿಗೆ ನೊಂದಾವಣಿ ಅಗತ್ಯವಿರುವುದಿಲ್ಲ. ಮಾಸ್ಕ್ ಖಡ್ಡಾಯ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಿ.ಪಿ.ಎಲ್ ಕಾರ್ಡ್‍ದಾರರಿಗೆ ವಾರ್ಷಿಕ ರೂ. 5 ಲಕ್ಷದ ತನಕ ಎ.ಪಿ.ಎಲ್ ಕಾರ್ಡ್‍ದಾರರಿಗೆ ವಾರ್ಷಿಕ ಕುಟುಂಬಕ್ಕೆ 1.50 ಲಕ್ಷ ತನಕ ಚಿಕಿತ್ಸೆ ಉಚಿತವಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಇರ್ಷಾದುಲ್ ಇಸ್ಲಾಂ ಮದರಸ ಅಧ್ಯಕ್ಷ ಎಂ.ಎಚ್.ಹಸನಬ್ಬ ಪ್ರಕಟಣೆಯಲ್ಲಿ ತಿಳಿಸಿದ್ದಾರೆ