ಕೆದಿಲದ ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ಬಿಜೆಪಿ ಕೆದಿಲ ಶಕ್ತಿ ಕೇಂದ್ರ ಹಾಗೂ ಬಿಜೆಪಿ ಯುವ ಮೋರ್ಚಾ ಪುತ್ತೂರು ಮಂಡಲ ಸಹಕಾರದೊಂದಿಗೆ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮ ಕೆದಿಲದಲ್ಲಿ ನಡೆಯಿತು. ಒಟ್ಟು 615 ಮಂದಿ ಇದರ ಪ್ರಯೋಜನ ಪಡೆದುಕೊಂಡರು.
ಪುತ್ತೂರು ಶಾಸಕ ಸಂಜೀವ ಮಠಂದೂರು, ಬಿಜೆಪಿ ಕ್ಷೇತ್ರಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಕೋಶಾಧಿಕಾರಿ ರಮೇಶ್ ಭಟ್, ಪುಣಚ ಮಹಾ ಶಕ್ತಿಕೇಂದ್ರ ಅಧ್ಯಕ್ಷ ಹರಿಪ್ರಸಾದ್ ಯಾದವ್, ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್, ಸುರೇಶ್ ಭಟ್ ಇಡ್ಕಿದು, ಪುತ್ತೂರು ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುನಿತ್ ಮಾಡತ್ತಾರ್, ಭೇಟಿ ನೀಡಿ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ವಿತರಿಸಿ ಶುಭ ಹಾರೈಸಿದರು.
ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪುತ್ತೂರು ಯುವಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು, ಪ್ರಧಾನ ಕಾರ್ಯದರ್ಶಿ ರತನ್ ರೈ ಕುಂಬ್ರ, ಜಿಲ್ಲಾ ಯುವ ಮೋರ್ಚಾ ಕಾರ್ಯಾಕಾರಿಣಿ ಸದಸ್ಯ ಉಮೇಶ್ ಪೂಜಾರಿ ಮುರುವ, ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷ ಜಯಪ್ರಕಾಶ್ ಕೊಳಚಪ್ಪು,ಬಿಜೆಪಿ ಕೆದಿಲ ಶಕ್ತಿ ಕೇಂದ್ರ ಸಂಚಾಲಕ ಪದ್ಮನಾಭ ಭಟ್ ಪೆರ್ನಾಜೆ, ಹಿಂದೂ ಜಾಗರಣ ವೇದಿಕೆ ಮುಖಂಡ ಗಣರಾಜ್ ಭಟ್ ಕೆದಿಲ. ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಅಣಪ್ಪ ಕುಲಾಲ್, ಜಿತೇಶ್ ಕೆ., ಹಿಂದುಳಿದ ಮೋರ್ಚಾ ಸದಸ್ಯ ದಿನೇಶ್ ಮುರುವ, ಮಂಡಲ ಸಮಿತಿ ಸದಸ್ಯ, ಶ್ಯಾಮ್ ಪ್ರಸಾದ್ ಕೆದಿಲ ನಿಕಟಪೂರ್ವ ಗ್ರಾಮ ಪಂಚಾಯತ್ ಸದಸ್ಯಗಳಾದ ಪದ್ಮನಾಭ ಗೌಡ, ವಿಶಾಲಾಕ್ಷಿ, ಬೇಬಿ, ಕುಶಾಲಪ್ಪ ಕಜೆ, ಉಮರಬ್ಬ ಗಡಿಯಾರ, ಬೂತ್ ಸಮಿತಿ ಅಧ್ಯಕ್ಷರುಗಳು ಲಿಂಗಪ್ಪ ಗೌಡ ಕುದುಂಬ್ಲಾಡಿ, ವಿಶ್ವನಾಥ್ ಕೆ, ಹರೀಶ್ ವಿ, ಹಿಂದು ಜಾಗರಣ ವೇದಿಕೆ ಮುಖಂಡ ಸುರೇಶ್ ವಿ,.ಧರ್ಮಶ್ರೀ ವಿಶ್ವಸ್ಥ ಮಂಡಳಿ ಅಧ್ಯಕ್ಷರಾದ ಪುಷ್ಪರಾಜ್ ಹೆಗ್ಡೆ, ಹಿರಿಯ ಮುಖಂಡರಾದ ಗೋಪಾಲಕೃಷ್ಣ ಭಟ್ ಯು, ರಘು ಅಜಿಲ,ಮೋಹನ ಕಜೆ ಉಪಸ್ಥಿತರಿದ್ದರು. ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ದರ್ಣಪ್ಪ ಗೌಡ ವಾಲ್ತಾಜೆ. ನಿರ್ದೇಶಕರಾದ ಅನಂತಕೃಷ್ಣ ಭಟ್ ಪಿ ಕೆ ಕುಞಂಪ್ಪ, ಲಕ್ಷ್ಮಣ, ಧನಂಜಯ, ಶಿವರಾಮ ಭಟ್, ಜಗದೀಶ್, ಜಿ ಮಹಮ್ಮದ್, ಕೆ ರಾಮಣ್ಣ ಗೌಡ ಭೇಟಿ ನೀಡಿದರು.