ಬಿಜೆಪಿ ಮಾಣಿ ಮಹಾಶಕ್ತಿ ಕೇಂದ್ರ ಹಾಗೂ ಬಿಜೆಪಿ ಯುವ ಮೋರ್ಚದ ವತಿಯಿಂದ ಆಯುಷ್ಮಾನ್ ಭಾರತ್ ಯೋಜನೆಗೆ ಉಚಿತ ನೋಂದಾವಣೆ ಕಾರ್ಯಕ್ರಮ ವೀರಕಂಭ ಶ್ರೀ ಶಾರದ ಭಜನಾ ಮಂದಿರದಲ್ಲಿ ನಡೆಯಿತು .
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಸಂದೇಶ ಕುಮಾರ್ ಶೆಟ್ಟಿ ಅರೆಬೆಟ್ಟು ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮಾಣಿ ಶಕ್ತಿಕೇಂದ್ರದ ಅಧ್ಯಕ್ಷರಾದ ರೊನಾಲ್ಡ್ ಡಿಸೋಜ ವಹಿಸಿದ್ದರು. ಶ್ರೀ ಶಾರದಾ ಭಜನಾ ಮಂದಿರದ ಸಂಚಾಲಕ ನಾರಾಯಣ ಭಟ್ ಬೆತ್ತಸರವು ,ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಸನತ್ ಕುಮಾರ್ ರೈ ಉಪಸ್ಥಿತರಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಗೀತಾ ಚಂದ್ರಶೇಖರ್, ನೆರಳಕಟ್ಟೆ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಪುಷ್ಪರಾಜ್ ಚೌಟ ಶುಭ ಹಾರೈಸಿದರು. ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಸೀಮಾ ಮಾಧವ, ವೀರಕಂಬ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯ ಜಯಂತಿ ಜನಾರ್ಧನ್ ,ಉದ್ಯಮಿ ಸಂದೀಪ್ ಕುಮಾರ್ ಶೆಟ್ಟಿ ಅರೆಬೆಟ್ಟು, ಬಿಜೆಪಿ ಹಿಂದುಳಿದ ವರ್ಗದ ಸದಸ್ಯರಾದ ವೀರಪ್ಪ ಮೂಲ್ಯ, ವೀರಕಂಬ ಗ್ರಾಮ ಬೂತ್ ಸಮಿತಿಯ ಅಧ್ಯಕ್ಷರುಗಳಾದ ದಿನೇಶ್ ಪೂಜಾರಿ ಹಾಗೂ ಸದಾಶಿವ, ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಬೆತ್ತಸರವು ಹಾಗೂ ರಮೇಶ್ ಗೌಡ ಮೈರ, ಬಿಜೆಪಿ ಎಸ್. ಟಿ. ಮೋರ್ಚಾ ಸದಸ್ಯರಾದ ಕೇಶವ ನಾಯ್ಕ ಕೆಮ್ಮಟೆ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾದ ಚಂದ್ರಶೇಖರ ಬಾಯಿಲ, ಮಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಂಜೀವ ಮೂಲ್ಯ ಉಪಸ್ಥಿತರಿದ್ದರು ಸುಮಾರು 6 73 ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…