ಬಂಟ್ವಾಳ

ಬಿ.ಸಿ.ರೋಡ್ ಸೌಂದರ್ಯವೃದ್ಧಿ ಕಾಮಗಾರಿ ಆರಂಭ

 

 

ಬಿ.ಸಿ.ರೋಡು ಸುಂದರೀಕರಣ ಯೋಜನೆ ಕೆಲಸ ಕಾರ್ಯಗಳು ಸೋಮವಾರ ಆರಂಭಗೊಂಡಿದ್ದು, ಫ್ಲೈಓವರ್‌ನ ತಳಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಮಾರ್ಕಿಂಗ್ ನಡೆಯಿತು.  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಹತ್ವಾಂಕಾಂಕ್ಷೆಯ ಯೋಜನೆ ಇದಾಗಿದ್ದು, ಕಾಮಗಾರಿಗೆ ಶಂಕುಸ್ಥಾಪನೆ ಬಳಿಕ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸ ಆರಂಭ ವಿಳಂಬಗೊಂಡಿತ್ತು. ಇದೀಗ ಇಂಟರ್ಲಾಕ್ ಹಾಕುವುದು, ರಸ್ತೆ ಅಭಿವೃದ್ಧಿ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಮುಂಭಾಗ ಸರ್ಕಲ್ ನಿರ್ಮಾಣ ಹೀಗೆ ಹಲವು ಯೋಜನೆಗಳು ಖಾಸಗಿ ಸಂಸ್ಥೆಗಳ ಸಿಎಸ್ ಆರ್ ಫಂಡ್, ಸರ್ಕಾರದ ಅನುದಾನ ಸಹಿತ ನಗರ ಯೋಜನಾ ಪ್ರಾಧಿಕಾರದ ಸಹಕಾರದೊಂದಿಗೆ ನಡೆಯಲಿವೆ. ಶಾಸಕ ರಾಜೇಶ್ ನಾಯ್ಕ್  ಉಳಿಪ್ಪಾಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೀಗ ಆಧುನಿಕ ಮಾಧರಿಯ ಶೌಚಾಲಯ ನಿರ್ಮಾಣ, ಬಳಿಕ ರಸ್ತೆ ಅಭಿವೃದ್ಧಿ ಸಹಿತ ಹಂತಹಂತವಾಗಿ ಕಾಮಗಾರಿ ನಡೆಯಲಿದೆ ಎಂದವರು ತಿಳಿಸಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts