ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ನಾನಾ ಕಾಮಗಾರಿಗಳನ್ನು ಸೋಮವಾರ ಅಮ್ಟೂರಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿದರು.
ಶಾಂತಿಪಾಲಿಕೆ ಪರಿಶಿಷ್ಟ ಜಾತಿ ಕಾಲೊನಿ ಕಾಂಕ್ರಿಟೀಕರಣ ರಸ್ತೆ, ಅಮ್ಟೂರು ಗ್ರಾಮದ ಪೊಯ್ಯೆಕಂಡ ಕೃಷ್ಣಾಪುರ ಹೋಗುವ ರಸ್ತೆ, ಅಮ್ಟೂರು ಗ್ರಾಮದ ಜಂಕ್ಷನ್ನಲ್ಲಿ ಹೈಮಾಸ್ಟ್ ದೀಪವನ್ನು ಅವರು ಸೋಮವಾರ ಉದ್ಘಾಟಿಸಿದರು. ಒಂದು ಕೋಟಿ ರೂ ವೆಚ್ಚದಲ್ಲಿ ಕೃಷ್ಣಾಪುರ ಕಿಂಡಿ ಅಣೆಕಟ್ಟು ಉದ್ಘಾಟನೆಯಾಗಲಿದೆ ಎಂದವರು ಹೇಳಿದರು.
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಲೂಕು ಪಂಚಾಯಿತಿ ಸದಸ್ಯ ಮಹಾಬಲ ಆಳ್ವ, ಗೋಳ್ತಮಜಲು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮುಹಮ್ಮದ್ ಮುಸ್ತಪಾ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಕಾರ್ಯದರ್ಶಿ ಮಾಣಿ ಗಣೇಶ್ ರೈ, ಗೋಳ್ತಮಜಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ರಮಾನಾಥ ರಾಯಿ, ಪ್ರಧಾನ ಕಾರ್ಯದರ್ಶಿ ಯಶೋಧರ ಕರ್ಬೆಟ್ಟು, ಮಹಿಳಾ ಮೋರ್ಚಾದ ಉಪಾಧ್ಯಕ್ಷ ಲಕ್ಷ್ಮೀ ಪ್ರಭು, ಗೋಳ್ತಮಜಲು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗೋಪಾಲಕೃಷ್ಣ ಪೂವಳ, ಗೋಪಾಲ್ ಪೂಜಾರಿ, ಜಯಂತ ಗೌಡ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಮಹಾಬಲ ಸಾಲಿಯಾನ್, ಹಿರಿಯರಾದ ವಿಠಲ ಪ್ರಭು, ಅಮ್ಟೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶರತ್, ಬೂತ್ ಸಮಿತಿಯ ಬಿಜೆಪಿ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾದ ವೇಣುಗೋಪಾಲ್ ಶೆಟ್ಟಿಗಾರ್, ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಶಾಂತಿಪಳಿಕೆ, ಪಕ್ಷದ ಪ್ರಮುಖರಾದ ವಿಶಾಲ ಡಿ ಶೆಟ್ಟಿ ಬಾಳಿಕೆ, ಕಾಂತಪ್ಪ ಶೆಟ್ಟಿ ಬಾಳಿಕೆ, ರಾಜೇಶ್ ಶಾಂತಿಪಾಲಿಕೆ, ಪುರುಷೋತ್ತಮ್ ಟೈಲರ್, ಹಿರಿಯರಾದ ವಿಠಲ್ ಪ್ರಭು, ದೇವಕಿ ಪೂಜಾರಿ, ದಿವಾಕರ ಪೂಜಾರಿ, ವಿಖ್ಯಾತ್ ಶೆಟ್ಟಿ ಬಾಳಿಕೆ, ಹರೀಶ್ ಬಟ್ಟೆಹಿತ್ಲು, ವಸಂತ ಬಟ್ಟೆಹಿತ್ಲು, ರತಿನ್ ಪೂಜಾರಿ, ಪಕ್ಷದ ಪ್ರಮುಖರು ಬೂತ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಬೂತ್ ಸಮಿತಿ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ವಂದಿಸಿದರು.