ಬಂಟ್ವಾಳ: ಬಂಟ್ವಾಳ ತಾಲೂಕಿನ ಪೆರಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನವನ್ನು ಆ.29 ರಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು. ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಂತನಾದರೆ ದೇಶವೇ ಆರೋಗ್ಯವಂತ ದೇಶವಾಗುತ್ತದೆ. ಆರೋಗ್ಯದ ಬಗ್ಗೆ ಗಮನ ನೀಡುವುದು ಅಗತ್ಯವಾಗಿದ್ದು ಕೇಂದ್ರ ಸರಕಾರದ ಆಯುಷ್ಮಾನ್ ಕಾರ್ಡು ಪ್ರತಿಯೊಬ್ಬರಿಗೂ ಆಪತ್ಕಾಲದಲ್ಲಿ ಸಹಕಾರಿಯಾಗುತ್ತದೆ ಎಂದು ಶಾಸಕರು ಶುಭ ಹಾರೈಸಿದರು.
ನೇರಳೆಕಟ್ಟೆ ಸಿ.ಎ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ್ ಚೌಟ, ಮಾಣಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸನತ್ ಕುಮಾರ್ ರೈ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಹಿರಿಯರಾದ ಬಿ.ಟಿ. ನಾರಾಯಣ ಭಟ್, ನಾರಾಯಣ ಶೆಟ್ಟಿ ತೋಟ ಮಾಣಿ, ಗ್ರಾ.ಪಂ ಸದಸ್ಯ ಉಮೇಶ ಎಸ್.ಪಿ., ಬೂತ್ ಸಮಿತಿ ಅಧ್ಯಕ್ಷ ರಾಜಾರಾಮ ಕಾಡೂರು , ಜಿಲ್ಲಾ ಯುವ ಮೋರ್ಚಾದ ವಿನೀತ್ ಶೆಟ್ಟಿ, ತಾಲೂಕು ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೀಮಾ ಮಾಧವ, ಉಪಾಧ್ಯಕ್ಷರಾದ ಲಖಿತ ಆರ್.ಶೆಟ್ಟಿ, ಹಿರಣ್ಮಯಿ ಕಲ್ಲಡ್ಕ, ಹರೀಶ್ ರೈ ಪಾನೂರು, ಶ್ರೀನಿವಾಸ ಪೂಜಾರಿ, ರಾಘವ ಏನಾಜೆ, ಹಿಂದು ಜಾಗರಣ ವೇದಿಕೆ ವಿಭಾಗ ಸಂಪರ್ಕ ಪ್ರಮುಖ ರತ್ನಾಕರ ಶೆಟ್ಟಿ ಕಲ್ಲಡ್ಕ ಹಾಗೂ ಬಿಜೆಪಿ ಯುವ ಮೋರ್ಚ ಮತ್ತು ಮಹಿಳಾ ಮೋರ್ಚದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀದೇವಿ ಭಜನಾ ಮಂದಿರದಲ್ಲಿ 700ಕ್ಕೂ ಅಧಿಕ ಮಂದಿ ದಾಖಲಾತಿ
ಪೆರಾಜೆಯ ಶ್ರೀದೇವಿ ಭಜನಾ ಮಂದಿರ ಪೆರಾಜೆಯಲ್ಲಿ ಆಯುಷ್ಮಾನ್ ಕಾರ್ಡ್ ಅಭಿಯಾನ ಪ್ರಯುಕ್ತ ನಡೆದ ಆಯುಷ್ಮಾನ್ ಕಾರ್ಡು ದಾಖಲಾತಿ ಶಿಬಿರದಲ್ಲಿ ೭೦೦ಕ್ಕೂ ಹೆಚ್ಚು ಮಂದಿ ದಾಖಲಾತಿ ಮಾಡಿದರು. ಸ್ಥಳೀಯ ಯುವ ವೇದಿಕೆ ಪೆರಾಜೆ , ಬಿಜೆಪಿ ಯುವ ಮೋರ್ಚ ಮತ್ತು ಮಹಿಳಾ ಮೋರ್ಚ ಇವರ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು. ಬೂತ್ ಸಮಿತಿ ಅಧ್ಯಕ್ಷ ರಾಜಾರಾಮ ಕಾಡೂರು, ಗ್ರಾ.ಪಂ ಸದಸ್ಯ ಉಮೇಶ್ ಎಸ್. ಪಿ., ಬಿಜೆಪಿ ಮುಖಂಡರಾದ ಪುಷ್ಪ್ಪರಾಜ್ ಚೌಟ, ನಾರಾಯಣ ಶೆಟ್ಟಿ ಮಾಣಿ, ಗ್ರಾ.ಪಂ ಮಾಜಿ ಸದಸ್ಯರಾದ ಶ್ರೀನಿವಾಸ ಪೂಜಾರಿ , ಭಾರತಿ ಪೆರಾಜೆ, ಉಪನ್ಯಾಸಕ ಯತಿರಾಜ ಪೆರಾಜೆ ಮೊದಲಾದವರು ಕಾರ್ಯನಿರ್ವಹಿಸಿದರು. ತಾಲೂಕು ಮಹಿಳಾ ಮೋರ್ಚ ಕಾರ್ಯದರ್ಶಿ ಸೀಮಾ ಮಾಧವ, ಜಿಲ್ಲಾ ಯುವ ಮೋರ್ಚ ಸದಸ್ಯ ವಿನಿತ್ ಶೆಟ್ಟಿ, ರತ್ನಾಕರ ಶೆಟ್ಟಿ ಕಲ್ಲಡ್ಕ, ಮಹಿಳಾ ಮೋರ್ಚ ಉಪಾಧ್ಯಕ್ಷರಾದ ಲಖಿತ ಆರ್. ಶೆಟ್ಟಿ, ಹಿರಣ್ಮಯಿ ಮೊದಲಾದವರು ಶಿಬಿರಕ್ಕೆ ಭೇಟಿ ನೀಡಿದರು.