ಬಂಟ್ವಾಳ: ವಿಶೇಷಚೇತನ ವಿದ್ಯಾರ್ಥಿ ಕೌಶಿಕ್ ಆಚಾರ್ಯ ಅವರ ಸಾಧನೆಯನ್ನು ಮೆಚ್ಚಿ ಮುಂಬೈನ ದಾನಿ ಸುರೇಶ್ ಎಸ್.ಸಾಲ್ಯಾನ್ ಅಂಧೇರಿ ಅವರು ಪ್ರೋತ್ಸಾಹನಿಧಿ ಇತ್ತು ಶುಭ ಹಾರೈಸಿದ್ದಾರೆ. ಬಂಟ್ವಾಳ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ವೆಲೆಂಟೈನ್ ಡಿಸೋಜ ಸಲಹೆಯಂತೆ, ಪತ್ರಕರ್ತ ಸಂದೀಪ್ ಸಾಲ್ಯಾನ್ ಸಹಯೋಗದಲ್ಲಿ ಬಂಟ್ವಾಳ ಕಸ್ಬಾ ಕಂಚಿಕಾರ ಪೇಟೆಯ ಕೌಶಿಕ್ ನಿವಾಸಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮತ್ತು ಸದಸ್ಯ ಪತ್ರಕರ್ತ ಅರೀಫ್ ಕಲ್ಕಟ್ಟ ಭೇಟಿಯನ್ನಿತ್ತು ಸುರೇಶ್ ಸಾಲ್ಯಾನ್ ಕೊಡಮಾಡಿದ ಪ್ರೊತ್ಸಾಹನಿಧಿಯನ್ನು ಕೌಶಿಕ್‌ಗೆ ಹಸ್ತಾಂತರಿಸಿ ಶುಭಾರೈಸಿದರು. ಈ ಸಂದರ್ಭದಲ್ಲಿ ಕೌಶಿಕ್‌ನ ಹೆತ್ತವರಾದ ರಾಜೇಶ್ ಆಚಾರ್ಯ, ಜಲಜಾಕ್ಷಿ ಆಚಾರ್ಯ ಹಾಜರಿದ್ದು ಪುತ್ರನ ಸಾಧನೆ ಮತ್ತು ಭವಿಷ್ಯತ್ತಿನ ಯೋಚನೆಗಳನ್ನು ತಿಳಿಸಿದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)