ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ವತಿಯಿಂದ ಬಂಟ್ವಾಳದಲ್ಲಿರುವ ಯೋಜನೆಯ ಉನ್ನತಿ ಸೌಧದಲ್ಲಿ ಸರ್ಕಾರಿ ಸೌಲಭ್ಯಗಳ ಮಾಹಿತಿ, ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಪತಹಸೀಲ್ದಾರ್ ಶ್ರೀಧರ್, ಪ್ರತಿಯೊಬ್ಬರಿಗೂ ಆರೋಗ್ಯ ಕಾಳಜಿಯಿಂದ ಪ್ರಧಾನಿಯವರು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದರು.
ಆಯುಷ್ಮಾನ್ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ರತ್ನಾಕರ್, ಡಾ.ಅನಿರುದ್ಧ್ ಶೆಟ್ಟಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಹರೀಶ್ ಮಾಂಬಾಡಿ, ಯೋಜನೆಯ ಬಿ.ಸಿ.ರೋಡು ವಲಯಾಧ್ಯಕ್ಷ ಶೇಖರ್ ಸಾಮಾನಿ, ಬಂಟ್ವಾಳ ವಲಯಾಧ್ಯಕ್ಷ ವಸಂತ್ ಮೂಲ್ಯ ಉಪಸ್ಥಿತರಿದ್ದರು. ಅಮ್ಟೂರು ಗ್ರಾಮದ ಫಲಾನುಭವಿಗೆ ವೈದ್ಯಕೀಯ ವೆಚ್ಚದ ಸಹಾಯಧನ ವಿತರಿಸಲಾಯಿತು. ಯೋಜನಾಧಿಕಾರಿ ಜಯಾನಂದ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ 10 ಸಾವಿರ ಮಂದಿಗೆ ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಮೇಲ್ವಿಚಾರಕ ಕೇಶವ ಕೆ. ಸ್ವಾಗತಿಸಿದರು. ಬಂಟ್ವಾಳ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸ್ವಪ್ನ ಆರ್.ಜೈನ್ ವಂದಿಸಿದರು. ಮೇಲ್ವಿಚಾರಕಿ ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು