ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಹಾಗೂ ಅನಂತಾಡಿ ಯುವಕ ಮಂಡಲ ಇದರ ಆಶ್ರಯದಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಉಚಿತ ನೋಂದಾವಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅನಂತಾಡಿ ಯುವಕ ಮಂಡಲದ ಕಚೇರಿಯಲ್ಲಿ ನಡೆಯಿತು.
ಮಾಜಿ ಸಚಿವ ಬಿ.ರಮನಾಥ ರೈ ಉದ್ಘಾಟಿಸಿದರು. ಅನಂತಾಡಿ ಯುವಕ ಮಂಡಲ ಅದ್ಯಕ್ಷ ಕಿರಣ್ ಹೆಗ್ಡೆ ಅದ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯರಾದ ಮಂಜುಳ ಮಾಧವ ಮಾವೆ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾಲೂಕು ಪಂಚಾಯತು ಉಪಾದ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಶಿವರಂಜನ್ ಪೂಂಜ ಬಾಳಿಕೆ, ಮಾಣಿ ಬಿಲ್ಲವ ಸಂಘದ ಅದ್ಯಕ್ಷ ನಾರಾಯಣ ಸಾಲ್ಯಾನ್, ಯುವ ಕಾಂಗ್ರೆಸ್ ಬಂಟ್ವಾಳ ವಿದಾನಸಭಾ ಕ್ಷೇತ್ರಾದ್ಯಕ್ಷ ಪ್ರಶಾಂತ್ ಕುಲಾಲ್, ಡಾ.ಮನೋಹರ ರೈ, ಪ್ರಿನ್ಸಿಪಾಲ್ ಗಂಗಾಧರ ಆಳ್ವ, ನೇರಳಕಟ್ಟೆ ಸಿ.ಎ.ಬೇಂಕ್ ನಿರ್ದೇಶಕ ನಿರಂಜನ್ ರೈ, ನೆಟ್ಲಮುಡ್ನೂರು ಗ್ರಾಮ ಪಂಚಾಯತುಮಾಜಿ ಸದಸ್ಯ ಲತೀಫ್ ನೇರಳಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ರಾಜೇಶ್ ಪೂಜಾರಿ, ಸತೀಶ ಬಾಕಿಲ, ಪಲ್ಲವಿ ಲೋಕೇಶ ಪೂಜಾರಿ, ಮಜೀದ್ ಬಂಟ್ರಿಂಜ, ರವಿಚಂದ್ರ ಬಾಬನಕಟ್ಟೆ, ಸುಂದರ, ಆನಂದ, ನಾರಾಯಣ ಗೋಳಿಕಟ್ಟೆ, ಚೇತನ್ ಬಾಬನಕಟ್ಟೆ, ಬಾಬು ಜನತಾಗೃಹ ಉಪಸ್ಥಿತರಿದ್ದರು. ಇದೇ ವೇಳೆ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳಾದ ಸಂಜನಾ ರೈ (605), ಅವಿನಾಶ್ (559), ಹಾಗೂ ಶ್ರೀಯಾ ಆಳ್ವ (548) ಪ್ರತಿಭೆಯನ್ನು ಗುರುತಿಸಿ ಅವರನ್ನು ಪುರಷ್ಕರಿಸಲಾಯಿತು. 600ಕ್ಕೂ ಅಧಿಕ ಮಂದಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಯಿತು.
ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜಯಂತಿ ಪೂಜಾರಿ ಸ್ವಾಗತಿಸಿ ವಂದಿಸಿದರು, ಸತೀಶ್ ಪೂಜಾರಿ ಬಾಬನಕಟ್ಟೆ ನಿರೂಪಿಸಿದರು.