ಬಂಟ್ವಾಳ: ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದ್ದು, ಅನಗತ್ಯ ವಿಚಾರಗಳನ್ನು ತಂದು ಜನತೆ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಆಗಸ್ಟ್ 26ರಂದು ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಲಾಗುವುದು. ಈ ಕುರಿತು ಇತ್ತೀಚೆಗೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಘಟನೆಯ ಅಧ್ಯಕ್ಷರಾದ ಬಿ. ಎಂ. ಪ್ರಭಾಕರ್ ದೈವಗುಡ್ಡೆ ವಹಿಸಿದ್ದರು. ಸಂಘಟನೆಯ ಪ್ರಮುಖರಾದ ಬಿ.ಶೇಖರ್, ಪ್ರಕಾಶ್ ಶೆಟ್ಟಿ, ಲೋಕೇಶ್ ಅಲೆತ್ತೂರು, ರಾಜಾ ಚಂಡ್ತಿಮಾರ್, ರಾಮಣ್ಣ ವಿಟ್ಲ, ಹಾರುನ್ ರಶೀದ್, ಅಮಾನುಲ್ಲಾ, ತುಳಸೀದಾಸ್ ವಿಟ್ಲ, ಲೋಲಾಕ್ಷ, ಅಬ್ದುಲ್ ಕರೀಂ, ಜಗದೀಶ್ ಬಂಟ್ವಾಳ, ಪ್ರೇಮನಾಥ ಕೆ, ಶ್ರೀನಿವಾಸ ಭಂಡಾರಿ, ಸುರೇಶ್ ಕುಮಾರ್ ಬಂಟ್ವಾಳ್ ಇದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…