5 ಲಕ್ಷ ರೂ ವರೆಗಿನ ಎಲ್ಲಾ ವಿಧದ ಕಾಮಗಾರಿ ಗಳನ್ನು ತುಂಡು ಗುತ್ತಿಗೆಯ ಮೂಲಕ ನಿರ್ವಹಿಸಲು ಸರಕಾರದ ಅದೇಶ ಹೊರಡಿಸುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ರಾಜೇಶ್ ನಾಯ್ಕ್ ಅವರಿಗೆ ತಾಪಂ ಸದಸ್ಯ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಿಂದ ಅನುಷ್ಠಾನ ಗೊಳ್ಳುತ್ತಿರುವ ಶಾಸಕರ, ಲೋಕಸಭಾ ಸದಸ್ಯರ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಗಳಲ್ಲಿನ ವಿವಿಧ ಯೋಜನೆಗಳಲ್ಲಿ ರೂ. 5 ಲಕ್ಸ ವರೆಗಿನ ಕಾಮಗಾರಿಗಳನ್ನು ತುಂಡು ಗುತ್ತಿಗೆ ಕರಾರಿನಂತೆ ನಿರ್ವಹಿಸಲಾಗುತ್ತಿದ್ದು ಜಿಲ್ಲಾ ಪಂಚಾಯತ್ , ತಾ.ಪಂಚಾಯತ್ ಗ್ರಾಮ ಪಂಚಾಯತ್ ಗಳಲ್ಲಿ ಸಣ್ಣ ಸಣ್ಣ ಮೊತ್ತದ ಕಾಮಗಾರಿ ಗಳು ತುಂಡು ಗುತ್ತಿಗೆ ಆಧಾರದಲ್ಲಿ ಯಶಸ್ವಿಯಾಗಿ ಶೀಘ್ರವಾಗಿ ಪ್ರಗತಿ ಕಾಣಲು ಸಾದ್ಯವಾಗುತ್ತಿತ್ತು. ಈ ಬಗ್ಗೆ ಕಳೆದ ಬಾರಿ ಸರಕಾರ ತುಂಡು ಗುತ್ತಿಗೆಯನ್ನು ರದ್ದುಪಡಿಸಿತ್ತು.ಈ ಬಗ್ಗೆ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳ ಒತ್ತಡ, ಒತ್ತಾಯದ ಮೇರೆಗೆ ಶಾಸಕರು, ಸಚಿವರು ಸೇರಿದಂತೆ ಇತರರು ಸರಕಾರದ ಮೇಲೆ ಒತ್ತಡ ಹೇರಿ ಈ ಸಂಬಂಧಿಸಿದ ಅದೇಶವನ್ನು ಹಿಂಪಡೆಯಲಾಯಿತು. 2020ರ ಜುಲೈ 17ರವರೆಗೆ ತುಂಡು ಗುತ್ತಿಗೆ ಮುಂದುವರಿಸುವ ಅದೇಶ ಹೊರಡಿಸಲಾಗಿತ್ತು. ಆದರೆ ಈ ಅದೇಶ ಬರುವ ಹೊತ್ತಿನಲ್ಲಿ ಕೊರೊನಾ ಮಹಾಮಾರಿ ರೋಗದಿಂದಾಗಿ ಕಳೆದ ಮಾರ್ಚ ತಿಂಗಳನಿಂದ ಇವರೆಗೆ ತುಂಡು ಗುತ್ತಿಗೆ ಸಂಬಂಧಿಸಿದ ಯಾವುದೇ ಕಾಮಗಾರಿ ಕೆಲಸ ಕಾರ್ಯಗಳು ಸ್ಥಗಿತ ಗೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲಾ ಪಂಚಾಯತ, ತಾ.ಪಂಚಾಯತ್, ಗ್ರಾಮ ಪಂಚಾಯತ್ ಗಳ 15 ನೇ ಹಣಕಾಸು ಯೋಜನೆ ಸೇರಿದಂತೆ ಇತರ ಯೋಜನೆ ಅನುದಾನ ಗಳು ಶೀಘ್ರವಾಗಿ ಅನುಷ್ಠಾನ ಗೊಳ್ಳುವ ಹಿತದೃಷ್ಟಿಯಿಂದ ಈ ನಿಲುವು ಕೈಗೊಳ್ಳಬೇಕು ಎಂದು ಪ್ರಭು ಒತ್ತಾಯಿಸಿದ್ದಾರೆ.