ಬಂಟ್ವಾಳ: ಸತೀಶ್ ಭಂಡಾರಿ ಅಧ್ಯಕ್ಷತೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಬಿ.ಸಿ.ರೋಡಿನಲ್ಲಿ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ವಠಾರದಲ್ಲಿ ಸರಳ ಗಣೇಶೋತ್ಸವವನ್ನು ಈ ಬಾರಿ ಸರ್ಕಾರದ ನಿಯಮಾವಳಿ ಪ್ರಕಾರ ಆಚರಿಸಲಾಯಿತು. ಶನಿವಾರ ಬೆಳಗ್ಗೆ 9.30 ಕ್ಕೆ ಬಂಟ್ವಾಳ ಶ್ರೀ ಸೀತಾರಾಮ ದೇವಸ್ಥಾನದಿಂದ ಗಣೇಶನ ಮೂರ್ತಿಯನ್ನು ತಂದು ಬಿ ಸಿ ರೋಡು ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಸಭಾಂಗಣದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ನಡೆದು, ಸಂಜೆ 4.30 ಕ್ಕೆ ವಿಸರ್ಜನೆ ಪೂಜೆ ನಡೆಯಿತು. ನಂತರ ಶ್ರೀ ವೆಂಕಟ್ರಮಣ ಸ್ವಾಮಿ ದೇವಾಲಯದ ಬಳಿಯ ನೇತ್ರಾವತಿ ನದಿಯಲ್ಲಿ ಜಲಾಧಿವಾಸ ಗೊಳಿಸಲಾಯಿತು. ಈ ವೇಳೆ ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…