ಬಿ.ಸಿ.ರೋಡಿನ ಕೈಕುಂಜೆ ಹಿಂದು ರುದ್ರಭೂಮಿಯನ್ನು ಅಭಿವೃದ್ಧಿಪಡಿಸಲು ಹಲವು ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಪ್ರಥಮ ಹಂತವಾಗಿ ಪಾಲನಾ ಸಮಿತಿ ರಚನೆಯಾಗಿದೆ.
ರುದ್ರಭೂಮಿಗೆ ಶಾಸಕ ರಾಜೇಶ್ ನಾಯ್ಕ್ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ, ಅಭಿವೃದ್ಧಿಪಡಿಸುವ ಕುರಿತು ಸೂಚನೆಗಳನ್ನು ನೀಡಿದ್ದರು. ಪೊದೆ, ಗಿಡಗಂಟಿಗಳಿಂದ ಕೂಡಿದ್ದ ಸ್ಮಶಾನಕ್ಕೆ ಹೊಸರೂಪ ನೀಡುವ ಕುರಿತು ಅವರು ಹೇಳಿದ್ದರು. ಇದರನ್ವಯ ಹೊಸ ಪಾಲನಾ ಸಮಿತಿ ರಚನೆಯಾಗಿದೆ. ಅಧ್ಯಕ್ಷರಾಗಿ ಕೇಶವ ದೈಪಲ, ಕಾರ್ಯದರ್ಶಿಯಾಗಿ ಮಚ್ಚೇಂದ್ರ ಸಾಲಿಯಾನ್ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಬಿ.ರಾಮಚಂದ್ರರಾವ್ ಕೈಕುಂಜೆ, ಲಕ್ಷ್ಮಣ ಗೌಡ ಭಂಡಾರಿಬೆಟ್ಟು, ಉಮೇಶ್ ನಾಯಕ್ ಗಾಂದೋಡಿ, ಗಣೇಶ್ ದಾಸ್ ಪಲ್ಲಮಜಲು, ಭಾಸ್ಕರ ಕುಲಾಲ್ ಕಾಮಾಜೆ ಮತ್ತು ಚರಣ್ ಜುಮಾದಿಗುಡ್ಡೆ ಆಯ್ಕೆಗೊಂಡರು. ಕೋಶಾಧಿಕಾರಿಯಾಗಿ ಸುರೇಶ್ ಸಾಲಿಯಾನ್ ಚಿಕ್ಕಯ್ಯಮಠ ಹಾಗೂ ಜತೆಕಾರ್ಯದರ್ಶಿಯಾಗಿ ಹರಿಪ್ರಸಾದ್ ಭಂಡಾರಿಬೆಟ್ಟು ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಸಂಚಾಲಕರಾಗಿ ಪದ್ಮನಾಭ ಚಿಕ್ಕಯಮಠ, ಸಹಸಂಚಾಲಕರಾಗಿ ನಾರಾಯಣ ಮೂಲ್ಯ ಭಂಡಾರಿಬೆಟ್ಟು, ಭಾಸ್ಕರ ಟೈಲರ್, ಮುರಳೀಕೃಷ್ಣ ಕೊಡಂಗೆ, ಲೋಕೇಶ್ ಕುಲಾಲ್ ಮಠ, ಶಶಿಧರ ಕೈಕುಂಜೆ, ಅಶ್ವತ್ಥ ಅಲೆತ್ತೂರು, ಸದಾಶಿವ, ಸತೀಶ್ ಶೆಟ್ಟಿ ಮೊಡಂಕಾಪು, ಪ್ರದೀಪ್ ಬಿ.ಸಿ.ರೋಡ್, ಹರೀಶ್ ಚಿಕ್ಕಯ್ಯಮಠ, ಸುಧಾಕರ ಸಾಲಿಯಾನ್ ಸಂಚಯಗಿರಿ, ಶಿವಶಂಕರ ರಾವ್ ಅಲೆತ್ತೂರು, ಭೋಜ ಸಾಲಿಯಾನ್ ಕೈಕಂಬ ಮತ್ತು ವಿಶ್ವನಾಥ ಬಿ. ಆಯ್ಕೆಗೊಂಡರು.