ಅಕ್ಕನ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ತರಲೆಂದು ಪೇಟೆಗೆ ಹೋಗಿದ್ದ ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಮೃತದೇಹ ಸಮೀಪದ ಪೆರುವಾಯಿಯ ನೆಕ್ಕರೆ ಹೊಳೆಯಲ್ಲಿ ಪತ್ತೆಯಾಗಿದೆ.ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸತೀಶ್ (44) ಸಾವನ್ನಪ್ಪಿದವರು. ಇವರು ಸತೀಶ್ ಅವರು ಬಂಟ್ವಾಳದಲ್ಲಿ ಭತ್ತ ಕೊಯಿಲು ಮತ್ತು ಕಟಾವು ಮಾಡುವ ಕೆಲಸ ಮಾಡುತ್ತಿದ್ದು, ಭಾನುವಾರ ಕೆಲಸ ಮುಗಿಸಿಕೊಂಡು ಕನ್ಯಾನದಲ್ಲಿರುವ ಮನೆಯ ಕಡೆ ಬಂದಿದ್ದರು. ಬಳಿಕ ಅಕ್ಕನ ಮಕ್ಕಳಿಗೆ ತಿಂಡಿ ತರಲೆಂದು ಸಮೀಪದ ಅಂಗಡಿಗೆಂದು ತೆರಳಿದವರು ಮನೆಗೆ ಬರದೆ ಕಾಣೆಯಾಗಿದ್ದಾರೆ ಎಂದು ತಮ್ಮ ಆಶೋಕ್ ದೂರು ನೀಡಿದ್ದರು. ನಂದರಬೆಟ್ಟು ಎಂಬಲ್ಲಿನ ತೋಡಿನ ಸಮೀಪದ ಗಿಡದ ಮೊದೆಯ ಮಧ್ಯೆ ಸತೀಶ್ ಅವರು ಧರಿಸಿದ ಬಟ್ಟೆ ಹಾಗೂ ಕೊಡೆ ಕಂಡುಬಂದಿದ್ದು ಇವರು ಆಕಸ್ಮಿಕ ವಾಗಿ ಕಾಲು ಜಾರಿ ತೋಡಿಗೆ ಬಿದ್ದು ನಾಪತ್ತೆಯಾಗಿರಬೇಕು ಎಂಬ ಸಂಶಯವನ್ನು ಮನೆಯವರು ವ್ಯಕ್ತ ಪಡಿಸಿದ್ದರು. ಇದೀಗ ಅವರ ಮೃತದೇಹ ಪೆರುವಾಯಿಯ ನೆಕ್ಕರೆ ಹೊಳೆಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)