ಶನಿವಾರ 9.3ರ ಮಟ್ಟದಲ್ಲಿ (ಅಪಾಯದ ಮಟ್ಟ 8.5) ಅಪಾಯದ ಮಟ್ಟ ಮೀರಿ ಹರಿದು ಆತಂಕ ಮೂಡಿಸಿದ್ದ ನೇತ್ರಾವತಿ ನದಿಯ ಹರಿವು ಭಾನುವಾರದಂತೆ ಸೋಮವಾರ ಬೆಳಗ್ಗೆಯೂ ಇಳಿಮುಖವಾಗಿದೆ.
ಸೋಮವಾರ ಬೆಳಗ್ಗೆ 6.2 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನೇತ್ರಾವತಿ ಕೆಲ ಹೊತ್ತಿನಲ್ಲಿ 6.1 ಮೀಟರ್ ಗೆ ತಗ್ಗಿತ್ತು. ಘಟ್ಟ ಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ನೀರಿನ ಹರಿವು ಹೊಂದಿಕೊಂಡು ನೇತ್ರಾವತಿ ನದಿಯ ಹರಿವು ಬಂಟ್ವಾಳದಲ್ಲಿ ಏರಿಳಿತವಾಗುತ್ತದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಭಾನುವಾರದಂತೆ ಸೋಮವಾರವೂ ಗುಡುಗು ಮಿಂಚಿನ ಸಹಿತ ಧಾರಾಕಾರವಾಗಿ ಮಳೆಯಾಗುತ್ತಿದೆ. ಬಿ.ಸಿ.ರೋಡ್, ಬಂಟ್ವಾಳ ಸಹಿತ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು, ನದಿ, ಹಳ್ಳ, ಕೆರೆ, ನೀರು ನಿಂತಿರುವ ಪ್ರದೇಶಗಳಿಗೆ ಸಾರ್ವಜನಿಕರು, ಮಕ್ಕಳು, ವೃದ್ಧರು ತೆರಳಬಾರದಾಗಿ ಆಡಳಿತ ವಿನಂತಿಸಿದೆ.ಬಂಟ್ವಾಳ ತಾಲೂಕಿನಲ್ಲಿ ಕಳೆದ ಒಂದು ದಿನದಲ್ಲಿ 113.2 ಮಿ.ಮೀ ಮಳೆಯಾಗಿದ್ದು, ಸೋಮವಾರವೂ ಧಾರಾಕಾರ ಮಳೆಯಾಗುವ ಸಂಭವವಿದೆ.