ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಆಶ್ರಯದಲ್ಲಿ ನಡೆಯುತ್ತಿರುವ ದೇಶವ್ಯಾಪಿ ಭಾರತ ಉಳಿಸಿ ಆಂದೋಲನದ ಭಾಗವಾಗಿ ಬಂಟ್ವಾಳ ತಾಲೂಕು ಜೆಸಿಟಿಯು ನೇತೃತ್ವದಲ್ಲಿ ಸೋಮವಾರ ಬಿಸಿರೋಡು ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಯಿತು.
ಕೇಂದ್ರ ಸರಕಾರ ಕೋವಿಡ್-೧೯ ಸೋಂಕು ಹರಡುವುದನ್ನು ಸಮರ್ಥವಾಗಿ ನಿಯಂತ್ರಿಸುವ ಬದಲು ಲಾಕ್ ಡೌನ್ ಹೇರಿ ಬಡ ಕಾರ್ಮಿಕರ ಹಾಗೂ ಮಧ್ಯಮ ವರ್ಗವನ್ನು ಸಂಕಷ್ಟಕ್ಕೀಡುಮಾಡಿದೆ. ಭೂ ಸುಧಾರಣೆ ಕಾಯ್ದೆ, ಕಾರ್ಮಿಕ ಕಾಯ್ದೆ, ಗಳಿಗೆ ಸುಗ್ರಿವಾಜ್ಞೆ ಮೂಲಕ ತಿದ್ದು ಪಡಿ ತಂದು ರೈತ ಕಾರ್ಮಿಕರನ್ನು ಬೀದಿ ಪಾಲು ಮಾಡಲು ಹೊರಟಿದೆ. ಚುನಾವಣಾ ಪೂರ್ವದಲ್ಲಿ ಯುವಕರಿಗೆ ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಗಳು ಹುಸಿಯಾಗಿದೆ. ನೂತನ ಶಿಕ್ಷಣ ನೀತಿ ಜ್ಯಾರಿಗೆ ತಂದು ವಿದ್ಯಾರ್ಥಿಗಳ ಭವಿಷ್ಯವನ್ನು ಹತ್ತಿಕ್ಕಲಾಗುತ್ತಿದೆ. ಸಂವಿಂಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಿ ಪ್ರಜಾಪ್ರಭುತ್ವದ ಆಶಯಗಳಿಗೆ ತದ್ವಿರುದ್ಧವಾದ ನೀತಿಗಳು ಜ್ಯಾರಿಗೊಳಿಸಲಾಗುತ್ತಿದೆ. ಸಾಮ್ರಾಜ್ಯ ಶಾಹಿಪರ ನೀತಿಗಳು ಭವಿಷ್ಯದಲ್ಲಿ ದೇಶದ ಅಪಾಯದ ಮುನ್ಸೂಚನೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎಐಟಿಯುಸಿ ಬಂಟ್ವಾಳ ತಾಲೂಕು ಕಾರ್‍ಯದರ್ಶಿ ಬಿ.ಶೇಖರ್, ಸಿಐಟಿಯು ತಾಲೂಕು ಕಾರ್‍ಯದರ್ಶಿ ರಾಮಣ್ಣ ವಿಟ್ಲ, ಡಿ ವೈ ಎಫ್ ಐ ತಾಲೂಕು ಕಾರ್‍ಯದರ್ಶಿ ನ್ಯಾಯವಾದಿ ತುಳಸೀದಾಸ್ ವಿಟ್ಲ, ಎಐವೈಎಫ್ ತಾಲೂಕು ಅಧ್ಯಕ್ಷ ಪ್ರೇಮ್ ನಾಥ್ ಕೆ., ಎನ್ ಎಫ್ ಐ ಡಬ್ಲೂ ಜಿಲ್ಲಾ ಕಾರ್‍ಯದರ್ಶಿ ಭಾರತಿ ಪ್ರಶಾಂತ್ ಮಾತನಾಡಿದರು. ನೇತೃತ್ವವನ್ನು ಎಐಟಿಯುಸಿ ಮುಂದಾಳು ಸರಸ್ವತಿ ಕಡೇಶಿವಾಲಯ, ಸರೋಜಿನಿ ಕುರಿಯಾಳ, ಸಿಐಟಿಯು ಮುಂದಾಳು ಲೋಲಾಕ್ಷಿ, ಎಐವೈಎಫ್ ತಾಲೂಕು ಕಾರ್‍ಯದರ್ಶಿ ಶ್ರೀನಿವಾಸ ಭಂಡಾರಿ, ಹರ್ಷಿತ್ ಸುವರ್ಣ, ಎ ಐ ಎಸ್ ಎಫ್ ನಾಯಕ ಹರ್ಷಿತ್ ಕೆ, ಡಿವೈಎಫ್‌ಐ ಮುಖಂಡರಾದ ನ್ಯಾಯವಾದಿ ಮಹಮ್ಮದ್ ಗಝಾಲಿ, ಸುರೇಂದ್ರ ಕೋಟ್ಯಾನ್, ಖಲೀಲ್ ಬಾಪು ಉಪಸ್ಥಿತರಿದ್ದರು. ಎಐಟಿಯುಸಿ ಮುಖಂಡ ಸುರೇಶ್ ಕುಮಾರ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಸ್ವಾಗತಿಸಿದರು. ಸಿಐಟಿಯು ಮುಖಂಡ ಉದಯ ಕುಮಾರ್ ವಂದಿಸಿದರು.