ಕೊರೊನಾ ವೈರಸ್ ಭೀತಿಯಿಂದ ಲಾಕ್ಡೌನ್ ಪರಿಸ್ಥಿಯಿಂದ ಸಂಕಷ್ಟದಲ್ಲಿರುವ ಅಕ್ಷರ ದಾಸೋಹ ನೌಕರರಿಗೆ ವೇತನ ನೀಡುವ ಬಗ್ಗೆ ಮತ್ತು ದಾಸೋಹ ನೌಕರರಿಗೆ ಲಾಕ್ಡೌನ್ ಅವಧಿಯ ಪ್ರತಿ ತಿಂಗಳು 6 ಸಾವಿರ ರೂ ನೀಡಬೇಕು ಮತ್ತು ತಕ್ಷಣ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬಿ.ಸಿ.ರೋಡ್ ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ. ಕೋವಿಡ್-19 ಲಾಕ್ಡೌನ್ ಪ್ರಾರಂಭವಾದ ಬಳಿಕ ಅವರಿಗೆ ಯಾವುದೇ ಪರಿಹಾರ ದೊರೆತಿಲ್ಲ. 2 ಲಕ್ಷ ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದ್ದರೂ ಅವರಿಗೆ ಈ ತನಕ ಯಾವುದೇ ನಯಾ ಪೈಸೆ ದೊರೆತಿಲ್ಲ ಕೆಲಸವೂ ಇಲ್ಲ ಪರಿಹಾರವೂ ಇಲ್ಲದೆ ಅವರು ಜೀವನ ನಿರ್ವಹಣಿಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಏಪ್ರಿಲ್ ನಂತರದ ವೇತನ ಹಾಗೂ ತಿಂಗಳಿಗ 6 ಸಾವಿರ ರೂದಂತೆ ಕೋವಿಡ್ ಪರಿಹಾರವನ್ನು ಏಕಗಂಟಿನಲ್ಲಿ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಅಕ್ಷರ ದಾಸೋಹ ನೌಕಕರ ಸಂಘಟನೆಯ ತಾಲೂಕು ಅಧ್ಯಕ್ಷರಾದ ವಿನಯ ನಡುಮೊಗರು ,ಸಿಐಟಿಯು ಮುಖಂಡರಾದ ಉದಯ ಕುಮಾರ್ ಬಂಟ್ವಾಳ, ಜನಾರ್ಧನ ಕುಲಾಲ್, ಡಿವೈಎಫ್ಐ ಮುಖಂಡರಾದ ಸುರೇಂದ್ರ ಕೋಟ್ಯಾನ್, ಲೋಲಾಕ್ಷಿ ಬಂಟ್ವಾಳ, ಲಿಯಾಕತ್ ಖಾನ್ ಮುಂತಾದವರು ಇದ್ದರು.