ಬಂಟ್ವಾಳ: ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಕಲಾಯಿ ಎಂಬಲ್ಲಿ ಅಲ್ಪಸಂಖ್ಯಾತ ಇಲಾಖೆ ಹಾಸ್ಟೆಲ್ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಇದು ಅಪಾಯಕಾರಿಯಾಗಿದೆ ಎಂದು ಸ್ಥಳೀಯ ನಿವಾಸಿ ಶಂಕರ ಶೆಟ್ಟಿಯವರ ದೂರಿನನ್ವಯ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಸೂಕ್ತ ಮುನ್ನೆಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳುವವರೆಗೆ ಕಾಮಗಾರಿ ನಡೆಸದಂತೆ ಶಾಸಕರು ಗುತ್ತಿಗೆದಾರರು ಮತ್ತು ಇಂಜಿನಿಯರುಗಳಿಗೆ ಸೂಚಿಸಿದ್ದಾರೆ. ಎರಡು ದಿನಗಳ ಹಿಂದೆ ಸುರಿದ ಮಳೆಗೆ ಪಕ್ಕದ ಗುಡ್ಡೆ ಜರಿದಿತ್ತು.
ಕಟ್ಟಡ ನಿರ್ಮಾಣಕ್ಕಾಗಿ ರಸ್ತೆ ಬದಿ ಗುಡ್ಡ ಅಗೆಯಲಾಗಿದ್ದು ನಿರ್ಮಾಣದ ಜಾಗದ ಹಿಂಭಾಗ ಕುಸಿಯುವ ಭೀತಿಯಲ್ಲಿದ್ದು, ಲೋಕೋಪಯೋಗಿ ಇಲಾಖೆಯವರು ಈ ಹಿಂದೆ ಸ್ಥಳ ಪರಿಶೀಲಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿರುತ್ತಾರೆ, ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವವರೆಗೆ ಕಾಮಗಾರಿ ನಡೆಸದಂತೆ ಶಾಸಕರು ಗುತ್ತಿಗೆದಾರರಿಗೆ ಹಾಗೂ ಇಂಜಿನೀಯರ್ ಗಳಿಗೆ ಸೂಚಿಸಿರುತ್ತಾರೆ, ಈ ಸಂದರ್ಭದಲ್ಲಿ ದೂರುದಾರರಾದ ಶಂಕರ ಶೆಟ್ಟಿ, ಸ್ಥಳಿಯರಾದ ಜನಾರ್ಧನ ಬಾರಿಂಜೆ, ಕಾರ್ತಿಕ್ ಬಳ್ಳಾಲ್, ಪುನಿತ್ ಶೆಟ್ಟಿ, ಇಲ್ಯಾಸ್, ಕೆ.ಆರ್.ಡಿ.ಎಲ್ ಇಂಜಿನಿಯರ್ ರಕ್ಷಿತ್ ಗುತ್ತಿಗೆದಾರರು ಉಪಸ್ಥಿತರಿದ್ದರು.