ಬಿಜೆಪಿಯ ಅಮ್ಟೂರು ಗ್ರಾಮ ಸಮಿತಿ ಆಶ್ರಯದಲ್ಲಿ ಅಯೋಧ್ಯೆ ಕರಸೇವಕರಿಗೆ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ನಡೆಯಿತು. ಅಯೋಧ್ಯೆ ಶ್ರೀರಾಮಮಂದಿರ ಶಿಲಾನ್ಯಾಸ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರಸೇವಕರಾಗಿ ದುಡಿದ ಅಮ್ಟೂರು ಗ್ರಾಮದ ಶೀನ ಶೆಟ್ಟಿಗಾರ್ ವಿಶಾಂತಿಕೋಡಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ತಾಪಂ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, 1990ರಲ್ಲಿ ಪುತ್ತೂರಿನ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕರಾಗಿದ್ದ ಶೇಖರ್ ನಾರಾವಿ ಹಾಗೂ ಮಾಜಿ ಶಾಸಕ ಉರಿಮಜಲು ರಾಮ್ ಭಟ್ ನೇತೃತ್ವದಲ್ಲಿ ಕರಸೇವಕರಾಗಿ ಹೊರಟ ತಂಡವು ಕೆಲವೊಂದು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ತೆರಳಿತ್ತು. ಅವತ್ತಿನ ಮುಲಾಯಂ ಸರ್ಕಾರ ಈ ತಂಡವನ್ನು ಬಂಧಿಸಿ ಉತ್ತರ ಪ್ರದೇಶದ ಕಾರಾಗೃಹದಲ್ಲಿ ಇರಿಸಿತ್ತು. ಇಂಥ ಮಾನಸಿಕ ಹಿಂಸೆ, ನೋವು ಅನುಭವಿಸಿದ ಶೀನ ಶೆಟ್ಟಿಗಾರ್ ಸಂಕಲ್ಪ ಇಂದು ನೆರವೇರಿದೆ. ಪ್ರಧಾನಿ ಮೋದಿಯವರು ಭೂಮಿಪೂಜೆ ಮಾಡುವ ಮೂಲಕ ಕನಸು ನನಸಾಗಿಸಿದ್ದಾರೆ ಎಂದರು.
ಶ್ರೀಕೃಷ್ಣ ಭಜನಾ ಮಂದಿರ ಅಮ್ಟೂರು, ವಿಶ್ವ ಹಿಂದು ಪರಿಷತ್, ಭಜರಂಗದಳ ವತಿಯಿಂದ ಶ್ರೀರಾಮ ಸಂಕೀರ್ತನೆ ಹಾಗೂ ಪ್ರಾರ್ಥನೆ ನಡೆದವು.
ಕೋರನ ವೈರಸ್ ನಿಂದ ಮುಕ್ತಿಯಾಗಲಿ ಎಂದೂ ಪ್ರಾರ್ಥಿಸಲಾಯಿತು. ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ರಮೇಶ್ ಶೆಟ್ಟಿಗಾರ್, ಅಮ್ಟೂರು ಬೂತ್ ಸಮಿತಿ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಬೈದರಡ್ಕಾ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಪೂವಪ್ಪ ಟೈಲರ್, ನಿಕಟಪೂರ್ವ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಗೋಪಾಲ್ ಪೂಜಾರಿ, 181 ಬೂತ್ ಸಮಿತಿ ಅಧ್ಯಕ್ಷರಾದ ಶ್ರೀಧರ ರಾಯಪ್ಪ ಕೊಡಿ, ರಾಯಪ್ಪ ಕೊಡಿ ಶ್ರೀಕೃಷ್ಣ ಭಜನಾ ಮಂದಿರದ ಅರ್ಚಕರಾದ ಮೋನಪ್ಪ ಆಚಾರ್ಯ ಬಜರಂಗ ದಳದ ಸಂಚಾಲಕರಾದ ಕೌಶಲ್ ಶೆಟ್ಟಿ ಬಾಳಿಕೆ, ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಶೆಟ್ಟಿಗಾರ್, ಕಾರ್ಯದರ್ಶಿಗಳಾದ ಪುರುಷೋತ್ತಮ ಪೂಜಾರಿ ಶಾಂತಿಪಳಿಕೆ ಹಾಗೂ ಜಿತೇಶ್ ಶೆಟ್ಟಿ ಬಾಳಿಕೆ, ಪುರುಷೋತ್ತಮ್ ಟೈಲರ್, ಊರ ಪ್ರಮುಖರಾದ ಮಹಾಬಲ ಕುಲಾಲ್, ಶಂಕರ ಬಟ್ಟೆಹಿತ್ಲು, ದಿವಾಕರ ಪೂಜಾರಿ, ಶಂಕರ್ ಅಂಚನ್, ತಾರನಾಥ್ ಅಮ್ಟೂರು, ಅನಿಲ್ ಕುಮಾರ್, ಕುಶಾಲಪ್ಪ ಮಾಸ್ಟರ್, ಹರೀಶ್ ಬಟ್ಟೆಹಿತ್ಲು, ವಿಖ್ಯಾತ್ ಬಾಳಿಕೆ, ಸುರೇಶ್ ಅಮ್ಟೂರು, ನಂದನ್ ರೈ, ಮನೀಶ್ ಕುಮಾರ್, ರಾಜೇಶ್ ಅಮ್ಟೂರು, ಪೃಥ್ವಿ ಶಾಂತಿಪಳಿಕೆ ಜಯಪ್ರಕಾಶ್. ಪವನ್ ಕುಮಾರ್ ಉಪಸ್ಥಿತರಿದ್ದರು