ಬಂಟ್ವಾಳ

ಮನೆ ಮನೆ ಕೃಷ್ಣ: ಛಾಯಾಚಿತ್ರ ಸ್ಪರ್ಧೆ

ಬಂಟ್ವಾಳ: ಯುವ ಸಂಗಮ ಮೆಲ್ಕಾರ್ (ರಿ.) ಇದರ ೨೩ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪ್ರಯಕ್ತ  ಈ ವರ್ಷ ‘ಮನೆ ಮನೆ ಕೃಷ್ಣ’ ಛಾಯಾಚಿತ್ರ ಸ್ಫರ್ಧೆಯನ್ನು ಏರ್ಪಡಿಸಿದೆ ಎಂದು ಯುವ ಸಂಗಮದ ಪ್ರಕಟಣೆ ತಿಳಿಸಿದೆ. ಆಸಕ್ತರು ತಾವು ತಮ್ಮ ಮಕ್ಕಳ ಕೃಷ್ಣ ವೇಷ ಧರಿಸಿದ ಛಾಯಾಚಿತ್ರ ವನ್ನು ಅಂಚೆ ಮೂಲಕ ಓಂ ಪ್ರಕಾಶ್, ಅಧ್ಯಕ್ಷರು ಯುವ ಸಂಗಮ ಮೆಲ್ಕಾರ್ (ರಿ.) ಕೆ/ಆ. ನಿಶಾಂತ್ ಆಯಿಲ್ ಸೆಂಟರ್, ಮೆಲ್ಕಾರ್, ಪಾಣೆಮಂಗಳೂರು-೫೭೪೨೩೧ ಈ ವಿಳಾಸಕ್ಕೆ  ಕಳುಹಿಸತಕ್ಕದ್ದು.
೧೦ ವರ್ಷದೊಳಗಿನ ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು,ಒಂದು ಮಗುವಿನ ಒಂದು  ಛಾಯಾಚಿತ್ರವನ್ನುಮಾತ್ರ  ಕಳುಹಿಸತಕ್ಕದ್ದು, ಆಗಸ್ಟ್ ೧೩ರ ಒಳಗಾಗಿ ಛಾಯಾಚಿತ್ರ ತಲುಪಬೇಕು. ನಂತರ ಬಂದ ಛಾಯಾಚಿತ್ರವನ್ನು ಸ್ಪರ್ದೆಗೆ ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ಫೋಟೋದ ಹಿಂಭಾಗದಲ್ಲಿ ಮಗುವಿನ ಹೆಸರು, ಪ್ರಾಯ, ಪೂರ್ತಿ ವಿಳಾಸ, ಮೊಬೈಲ್ ನಂಬ್ರವನ್ನು ನಮೂದಿಸತಕ್ಕದ್ದು,ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ತಿಳಿಸಲಾಗಿದೆ.  ಆಯ್ದ ಛಾಯಾಚಿತ್ರಕ್ಕೆ ಸೂಕ್ತ ಬಹುಮಾನ ನೀಡಲಾಗುವುದು. ಕೋವಿಡ್ ಮಹಾಮಾರಿಯ ಕಾರಣದಿಂದ ಈ ವರ್ಷ ಮೊಸರು ಕುಡಿಕೆ  ಆಚರಿಸಲು ಅನಾನುಕೂಲವಾಗಿರುವ ಹಿನ್ನಲೆಯಲ್ಲಿ ಮನೆಮನೆ ಕೃಷ್ಣ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ