ಬಂಟ್ವಾಳ: ಹಿಂದು ಜಾಗರಣಾ ವೇದಿಕೆಯ ಕರ್ಪೆ ಘಟಕ ವತಿಯಿಂದ ವಿಶೇಷ ಪೂಜೆ, ರಾಮ ಭಜನೆ ಸಂಕೀರ್ತನೆ, ಕರಸೇವಕರಿಗೆ ಸನ್ಮಾನ ಕಾರ್ಯಕ್ರಮ ಕರ್ಪೆ ಶ್ರೀರಾಮಾಂಜನೇಯ ಮಂದಿರದಲ್ಲಿ ಬುಧವಾರ ನಡೆಯಿತು.
ಈ ವೇಳೆ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೌದ್ಧಿಕ್ ಪ್ರಮುಖ್ ಚಂದ್ರಶೇಖರ ಕೈಯಬೆ, ಅಯೋಧ್ಯೆ ಶ್ರೀರಾಮ ಜನ್ಮ ಭೂಮಿ ಪವಿತ್ರ ಜಾಗದಲ್ಲಿ ಇವತ್ತು ಐತಿಹಾಸಿಕ ವಾಗಿ ಜಗತ್ತೀನ ಅತೀ ಅದ್ಭುತವಾದ ಭವ್ಯ ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ನೆರೆವೆರತ್ತೀರುವುದು,ನಮ್ಮೆಲ್ಲರ ಸೌಭಾಗ್ಯ ಎಂದರು.
ಹಿಂದು ಜಾಗರಣ ವೇದಿಕೆ ವಿಟ್ಲ ತಾ.ಸಂಪರ್ಕ ಪ್ರಮುಖ್ ಅರುಣ್ ಸಜೀಪ ಪ್ರಾಸ್ತಾವಿಕವಾಗಿ ಮಾತನಾಡಿ ಉಡುಪಿಯ ಪೇಜಾವರ ಸ್ವಾಮಿಜೀಗಳ ಪಾತ್ರವನ್ನು ಸ್ಮರಿಸಿದರು.ಸಿದ್ದಕಟ್ಟೆ ಪರಿಸರದಲ್ಲಿನ ಅಯೋಧ್ಯೆ ಕರಸೇವಕರಾದ ಗೋಪಾಲ ಗೌಡ ಕೊರ್ಯಾರು,ಓಬಯ ಗೌಡ ಮಂಚಕಲ್ಲು, ವಿಶ್ವನಾಥ ಶೆಟ್ಟಿಗಾರ್ ಸಂಗಬೆಟ್ಟು, ಯೋಗಿಶ್ ಶೆಟ್ಟಿಗಾರ್ ಉರಂಡಗೆ,ಸುಂದರ ಸಂಗಬೆಟ್ಟು, ಜನಾರ್ದನ ಗೌಡ ದೇವಸ,ವಾಸುದೇವ ಶೆಟ್ಟಿಗಾರ್ ಸಂಗಬೆಟ್ಟು ಅವರನ್ನು ಗೌರವಿಸಲಾಯಿತು. ಹಿ.ಜಾ.ವೇ ಜಿಲ್ಲಾ ಕಾರ್ಯದರ್ಶಿ ಚಂದ್ರ ಕಲಾಯಿ,ಹಿಂದು ಯುವವಾಹಿನಿ ಜಿಲ್ಲಾ ಸಯೋಂಜಕ ಪ್ರಶಾಂತ್, ಹಿ.ಜಾ.ವೇ.ಕರ್ಪೆ ಘಟಕ ಅದ್ಯಕ್ಷ ನವೀನ ಪೂಜಾರಿ,ಶ್ರೀರಾಮಾಂಜನೆಯ ಮಂದಿರ ವ್ಯವಸ್ಥಾಪಕರಾದ ಡಾ.ರಾಮರಾಯ ಪ್ರಭು ದೋಟ, ಸ್ಥಳೀಯ ಬಿಜೆಪಿ ಮುಖಂಡರಾದ ರತ್ನಕುಮಾರ್ ಚೌಟ, ಸಂಗಬೆಟ್ಟು ಗ್ರಾ.ಪ .ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಭಟ್ ದೋಟ, ಸಂದೇಶ್ ಶೆಟ್ಟಿ ಸಿದ್ದಕಟ್ಟೆ, ಮಾದವ ಶೆಟ್ಟಿಗಾರ್, ಉಮೇಶ್ ಗೌಡ ಮಂಚಕಲ್ಲು, ಹಿ.ಜಾ.ವೇ ಉಪಾಧ್ಯಕ್ಷ ರಂಜಿತ್ ಪೂವಳ,ಪ್ರದಾನ ಕಾರ್ಯದರ್ಶಿ ತೇಜಾಸ್ ಮರ್ದೊಟ್ಟು,ಮತ್ತಿತರರು ಭಾಗವಹಿಸಿದ್ದರು. ಸ್ಥಳೀಯ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ,ಧನ್ಯವಾದವಿತ್ತರು.