ಬಂಟ್ವಾಳ: ಘಟ್ಟ ಪ್ರದೇಶ ಸೇರಿದಂತೆ ಕರಾವಳಿಯಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಬುಧವಾರ ಬೆಳಗ್ಗೆ 7.5 ಮೀಟರ್ ಇದ್ದರೆ, ಸಂಜೆ ವೇಳೆ 7.1 ಇತ್ತು. ಆದರೆ ರಾತ್ರಿ ಮಳೆ ಸುರಿದರೆ ಗುರುವಾರ ಬೆಳಗ್ಗೆ ಮತ್ತೆ ಏರಿಕೆಯಾಗುವ ಸಂಭವವಿದೆ. ಅಪಾಯದ ಮಟ್ಟ 8.5 ಮೀ. ಆಗಿದ್ದು, ನಿರಂತರವಾಗಿ ಮಳೆಯಾದಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ.