ಬಂಟ್ವಾಳ: ವಿಟ್ಲದ ಕೊಳ್ನಾಡು ಗ್ರಾಮದ ರಾಜ್ಯ ಹೆದ್ದಾರಿ 101ರಲ್ಲಿ ಹಾದು ಹೋಗುವ ಕರೈ ಎಂಬಲ್ಲಿ ಮಂಗಳವಾರ ಮುಂಜಾನೆ ಬೀಸಿದ ಬಾರೀ ಗಾಳಿ ಮಳೆಗೆ ಹಲವಾರು ಬೃಹತ್ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ಹೆಚ್ಚಾರಿ ಸಂಚಾರ ಅಸ್ತವ್ಯಸ್ತಗೊಂಡಿತು. ಊರವರ ಸಹಕಾರದಿಂದ ಬಳಿಕ ರಸ್ತೆ ಸಂಚಾರಕ್ಕೆ ಅನುವುಮಾಡಿಕೊಡಲಾಯಿತು.
ಘಟನೆಯಲ್ಲಿ ಏಳು ವಿದ್ಯುತ್ ಕಂಬಗಳು ಧರೆಗುರುಳಿದವು. ವಿಟ್ಲದಿಂದ ಸಾಲೆತ್ತೂರು, ಮುಡಿಪು, ದೇರಳಕಟ್ಟೆ ಕಡೆಗಳಿಗೆ ತೆರಳುವ ವಾಹನಗಳು ಸಾಲುಗಟ್ಟಿ ನಿಂತವು. ಕಾರ್ಯಪ್ರವೃತ್ತರಾದ ಊರಿನ ನಾಗರಿಕರು,ಮರ ಕಟ್ಟಿಂಗ್ ಮಾಡುವ ಯಂತ್ರಗಳೊಂದಿಗೆ ಆಗಮಿಸಿ ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.