ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 6168 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಅವರಲ್ಲಿ 2854 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಈಗ 3138 ಮಂದಿಗೆ ಚಿಕಿತ್ಸೆ ನಡೆಯುತ್ತಿದೆ. ಒಟ್ಟು 176 ಮಂದಿ ಮೃತಪಟ್ಟಿದ್ದು, ಅವರಿಗೆಲ್ಲ ಕೊರೊನಾ ಸೋಂಕು ದೃಢಪಟ್ಟಿದೆ.
ಸೋಮವಾರ 153 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 124 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸೋಮವಾರ 7 ಮಂದಿ ಸಾವನ್ನಪ್ಪಿದ್ದಾರೆ.
ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಕಂಡುಬಂದಿದ್ದಾರೆ. ಮಂಗಳೂರು ತಾಲೂಕಿನಲ್ಲಿ ಒಟ್ಟು 4394 (ಇಂದು 119), ಬಂಟ್ವಾಳ ತಾಲೂಕಿನಲ್ಲಿ ಒಟ್ಟು 571 (ಇಂದು 11), ಮೂಡುಬಿದಿರೆ 93, ಮೂಲ್ಕಿ 90, ಬೆಳ್ತಂಗಡಿ 260 (ಇಂದು 6), ಪುತ್ತೂರು 267 (ಇಂದು 4) ಕಡಬ 53, ಸುಳ್ಯ 72 (ಇಂದು 1) ಪ್ರಕರಣಗಳು ದೃಢಪಟ್ಟಿವೆ. ದ.ಕ.ಜಿಲ್ಲೆಯ ಹೊರಗಿನ 12 ಮಂದಿಗೆ ಇಂದು ಸೋಂಕು ತಗಲಿದ್ದು, ಈ ರೀತಿಯಾಗಿ ಹೊರಜಿಲ್ಲೆಯ 368 ಮಂದಿಗೆ ಸೋಂಕು ತಗಲಿದೆ.