ವಿಟ್ಲ ಸೀಮೆಯನ್ನಾಳಿದ ಅರಸುಮನೆತನದ ಜನಾರ್ದನ ವರ್ಮ ಅರಸರು ಭಾನುವಾರ ನಿಧನ ಹೊಂದಿದರು. ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಸಹಿತ ಹಲವು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅವರು ಸಕ್ರಿಯರಾಗಿದ್ದರು.
ವಿಟ್ಲ ಅರಮನೆಯ ಜನಾರ್ಧನ ವರ್ಮ ಅರಸರು (84) ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ. ಮಧ್ಯಾಹ್ನ ೧೨ಕ್ಕೆ ಅರಸುಮನೆತನದ ವಿವಿಧಿ ವಿಧಾನಗಳ ಮೂಲಕ ಬಾಕಿಮಾರು ಗದ್ದೆಯಲ್ಲಿ ಅಂತ್ಯಕ್ರಿಯೆ ನಡೆಯಿತು. ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ, ಕುಂಡಡ್ಕ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಬ್ರಹ್ಮಕಲಶ, ವಿಟ್ಲ ಶ್ರೀ ಜಠಾಧಾರಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವಾಗಿ ಬ್ರಹ್ಮಕಲಶ ಇವರ ಕಾಲದಲ್ಲಿ ನಡೆದಿತ್ತು. ಸೋಮವಾರ ಸಾಯಂಕಾಲ ೪ ಗಂಟೆಯ ನಂತರ ವಿಟ್ಲ ವರ್ತಕರ ಸಂಘದ ವತಿಯಿಂದ ವಿಟ್ಲ ಪೇಟೆ ಬಂದ್ ಮಾಡಲು ನಿರ್ಧರಿಸಲಾಗಿದೆ.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)