ಬಂಟ್ವಾಳ

ಜನಾರ್ದನ ಪೂಜಾರಿ ಸಾಲಮೇಳ ಪರಿಕಲ್ಪನೆ ಇಂದು ಪ್ರಸ್ತುತ – ಡಿ.ಕೆ.ಶಿವಕುಮಾರ್

ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರ ಮಾಜಿ ಸಚಿವ ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ

ಹಿರಿಯ ಕಾಂಗ್ರೆಸ್ ನಾಯಕ, ಸಾಲಮೇಳದ ರೂವಾರಿ, ಕೆಪಿಸಿಸಿ ಮಾಜಿ ಅಧ್ಯಕ್ಷ ಬಿ. ಜನಾರ್ದನ ಪೂಜಾರಿ ಅವರ ಸಾಲಮೇಳ ಪರಿಕಲ್ಪನೆಯನ್ನು ಸರ್ಕಾರ ಅರ್ಥಮಾಡಿಕೊಂಡು ಆದರ್ಶವಾಗಿಟ್ಟು ಕಾರ್ಯಾಚರಿಸಬೇಕಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಬಂಟ್ವಾಳದಲ್ಲಿ ಕೇಂದ್ರ ಮಾಜಿ ಸಚಿವ ಕಾಂಗ್ರೆಸ್ ನ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಪೂಜಾರಿಯವರ ಆಶೀರ್ವಾದ ಪಡೆದು, ಮಾತುಕತೆ ನಡೆಸಿದರು. ಹಿಂದೆ ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಬಿ.ಜನಾರ್ದನ ಪೂಜಾರಿಯವರ ಆಶೀರ್ವಾದ ಪಡೆದಿದ್ದು, ಅವರ ಮಾರ್ಗದರ್ಶನ ಪಡೆದಿದ್ದೇನೆ. ಅವರಂಥ ಹಿರಿಯ ನಾಯಕರ ಕೈಕೆಳಗೆ ಕೆಲಸ ಮಾಡಿದ್ದೇವೆ ಎಂದ ಅವರು, ಪೂಜಾರಿ ಅವರು ದೇಶದ ಬಡಜನರಿಗೆ ಸಲ್ಲಿಸಿದ ಸೇವೆ ಸ್ಮರಣಾರ್ಹ. ಇತಿಹಾಸವನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ಇವತ್ತು ಸರ್ಕಾರ ಜನಾರ್ದನ ಪೂಜಾರಿ ಅವರ ಕಾನ್ಸೆಪ್ಟ್ ಗಳನ್ನು ತಿಳಿದುಕೊಳ್ಳಬೇಕು ಎಂದರು. ಸರ್ಕಾರ ಕೇವಲ ಘೋಷಣೆಗಳನ್ನು ಮಾಡುತ್ತಿದೆಯಷ್ಟೇ ಹೊರತು, ಜನರ ಕೈಗೆ ಅದು ತಲುಪಿಲ್ಲ ಎಂದು ಶಿವಕುಮಾರ್ ಹೇಳಿದರು. ಇದಕ್ಕೂ ಮೊದಲು ಪೂಜಾರಿಯವರ ಆಶೀರ್ವಾದ ಪಡೆದುಕೊಂಡ ಡಿ.ಕೆ.ಶಿವಕುಮಾರ್, ಪಕ್ಷದ ಸಂಘಟನೆ ಕುರಿತು ಚರ್ಚಿಸಿದರು. ಪೂಜಾರಿಯವರ ಪುತ್ರ ದೀಪಕ್, ಪತ್ನಿ  ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಆಹ್ಮದ್,ಶಾಸಕ ಯು.ಟಿ.ಖಾದರ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೋ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಗೇರು ನಿಗಮದ ಮಾಜಿ ಅಧ್ಯಕ್ಷ ಕಳ್ಳಿಗೆ ತಾರನಾಥ ಶೆಟ್ಟಿ,ಟಿ.ಎಂ.ಶಹೀದ್ ಹಾಜರಿದ್ದರು.

ಬಿ.ಸಿ.ರೋಡಿನಲ್ಲಿ ಸ್ವಾಗತ: ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲಬಾರಿಗೆ ಬಂಟ್ವಾಳ ಕ್ಕಾಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ  ಸ್ವಾಗತಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್,ಸುದೀಪ್ ಕುಮಾರ್ ರೈ, ಜಿಪಂ ಸದಸ್ಯರಾದ ಚಂದ್ರಪ್ತಕಾಶ್ ಶೆಟ್ಟಿ,ಪದ್ಮಶೇಖರ ಜೈನ್, ಎಂ.ಎಸ್.ಮಹಮ್ಮದ್,ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾ ಶೆಟ್ಟಿ,ಜಯಂತಿ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪುರಸಭಾ ಸದಸ್ಯರಾದ ವಾಸುಪೂಜಾರಿ,ಮಾಜಿ ಸದಸ್ಯರಾದ ಸದಾಶಿವ ಬಂಗೇರ,ವೆಂಕಪ್ಪ ಪೂಜಾರಿ ಬಂಟ್ವಾಳ, ಉಮ್ಮರ್ ಫಾರೂಕ್, ಪಿ.ಸಿ.ಮೋಹನ್, ಚಂದ್ರಶೇಖರ ಪೂಜಾರಿ, ರಜಾಕ್ ಕುಕ್ಕಾಜೆ,ತೇಜಸ್ವಿರಾಜ್,ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ,ಪಕ್ಷದ ಸ್ಥಳಿಯ ಮುಖಂಡರು ಇದ್ದರು. ಇದಕ್ಕು ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷ ಸಲೀಂ ಆಹ್ಮದ್ ಅವರು ಮುಡಿಪುವಿನ ಧರ್ಮಗುರು ಬೇಕಲ್ ಹಾಜಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts