ಬಂಟ್ವಾಳ

ತೋಟಗಾರಿಕೆ: ನರೇಗಾ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನ

2020-21ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ  ತೋಟಗಾರಿಕೆ ಕ್ಷೇತ್ರದಲ್ಲಿ ವಿವಿಧ ಕೆಲಸಗಳಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಯೋಜನೆಯ ಪ್ರಮುಖ ಉದ್ದೇಶ:- ತೋಟಗಾರಿಕೆಯಡಿ ರೈತರ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿಗಳಾದ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ – ತೆಂಗು, ಗೇರು, ಕೋಕೋ, ಕಾಳುಮೆಣಸು, ಅಂಗಾಂಶ ಬಾಳೆ, ಮಾವು, ಸಪೋಟ, ಅಡಿಕೆ, ವೀಳ್ಯೆದೆಲೆ, ಇನ್ನಿತರೆ. ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಾದ ಗೇರು, ತೆಂಗು, ಹಾಗೂ ಅಡಿಕೆ ತೋಟಗಳ ಪುನಶ್ಚೇತನ. ಬೇಡಿಕೆಯ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳ ಅಕುಶಲ ದೈಹಿಕ ಉದ್ಯೋಗವನ್ನು ಒದಗಿಸುವುದರ ಮೂಲಕ ನಿಗದಿತ ಗುಣಮಟ್ಟ ಹಾಗೂ ಬಾಳಿಕೆ ಬರುವ ಆಸ್ತಿಗಳ ಸೃಜನೆ. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ರೂ. 275 ಕೂಲಿ ದೊರಕುತ್ತದೆ.

ಫಲಾನುಭವಿಗಳ ಅರ್ಹತೆ: ಬಿ.ಪಿ.ಎಲ್. ಕಾರ್ಡ್ ಹೊಂದಿರುವ ರೈತರು, ಅಂಗವಿಕಲ ರೈತರು, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ರೈತರು, ಸ್ತ್ರೀ ಪ್ರಧಾನ ಕುಟುಂಬದ ರೈತರು,  ಭೂ ಸುಧಾರಣೆ ಫಲಾನುಭವಿಗಳು, ಸಣ್ಣ ರೈತರು ಮತ್ತು ಅತೀ ಸಣ್ಣ ರೈತರು. ಮತ್ತು ರೈತರು ಸ್ವಂತ ಜಮೀನು ಹೊಂದಿರಬೇಕು ಹಾಗೂ  ಉದ್ಯೋಗ ಚೀಟಿ ಹೊಂದಿರಬೇಕು.

ತೋಟಗಾರಿಕೆ ಬೆಳೆಗಳ ಅಂದಾಜು ಮೊತ್ತದ ವಿವರಗಳು (1 ಹೆಕ್ಟೆರ್‍ಗೆ): ತೆಂಗು ಬೆಳೆ ಪ್ರದೇಶ ವಿಸ್ತರಣೆ, ಅಂತರ (ಮೀ) -9*9, ಗಿಡಗಳ ಸಂಖ್ಯೆ-123, ಉದ್ಯೋಗ ಖಾತರಿ ಯೋಜನೆಯಡಿ ಲಭ್ಯ ಆರ್ಥಿಕ ಸೌಲಭ್ಯ (ರೂ ಲಕ್ಷಗಳಲ್ಲಿ)-66480, ಸೃಜಿಸುವ ಮಾನವ ದಿನಗಳು-177. ಗೇರು ಬೆಳೆ ಪ್ರದೇಶ ವಿಸ್ತರಣೆ, ಅಂತರ(ಮೀ)-6*6, ಗಿಡಗಳ ಸಂಖ್ಯೆ-277, ಉದ್ಯೋಗ ಖಾತರಿ ಯೋಜನೆಯಡಿ ಲಭ್ಯ ಆರ್ಥಿಕ ಸೌಲಭ್ಯ (ರೂ ಲಕ್ಷಗಳಲ್ಲಿ)-76017, ಸೃಜಿಸುವ ಮಾನವ ದಿನಗಳು-180. ಕೋಕೋ ಬೆಳೆ ಪ್ರದೇಶ ವಿಸ್ತರಣೆ, ಅಂತರ (ಮೀ) 2.7*5.4, ಗಿಡಗಳ ಸಂಖ್ಯೆ-685, ಉದ್ಯೋಗ ಖಾತರಿ ಯೋಜನೆಯಡಿ ಲಭ್ಯ ಆರ್ಥಿಕ ಸೌಲಭ್ಯ (ರೂ ಲಕ್ಷಗಳಲ್ಲಿ)-228485, ಸೃಜಿಸುವ ಮಾನವ ದಿನಗಳು-658. ಕಾಳುಮೆಣಸು ಬೆಳೆ ಪ್ರದೇಶ ವಿಸ್ತರಣೆ, ಅಂತರ(ಮೀ)-2.7*2.7, ಗಿಡಗಳ ಸಂಖ್ಯೆ-1370, ಉದ್ಯೋಗ ಖಾತರಿ ಯೋಜನೆಯಡಿ ಲಭ್ಯ ಆರ್ಥಿಕ ಸೌಲಭ್ಯ (ರೂ ಲಕ್ಷಗಳಲ್ಲಿ)- 118501, ಸೃಜಿಸುವ ಮಾನವ ದಿನಗಳು-297. ಅಂಗಾಂಶ ಬಾಳೆ ಬೆಳೆ ಪ್ರದೇಶ ವಿಸ್ತರಣೆ, ಅಂತರ(ಮೀ)-2*2, ಗಿಡಗಳ ಸಂಖ್ಯೆ-3000, ಉದ್ಯೋಗ ಖಾತರಿ ಯೋಜನೆಯಡಿ ಲಭ್ಯ ಆರ್ಥಿಕ ಸೌಲಭ್ಯ (ರೂ ಲಕ್ಷಗಳಲ್ಲಿ) -222644, ಸೃಜಿಸುವ ಮಾನವ ದಿನಗಳು-503. ಅಡಿಕೆ ಬೆಳೆ ಪ್ರದೇಶ ವಿಸ್ತರಣೆ, ಅಂತರ(ಮೀ)-2.7*2.7, ಗಿಡಗಳ ಸಂಖ್ಯೆ-1370, ಉದ್ಯೋಗ ಖಾತರಿ ಯೋಜನೆಯಡಿ ಲಭ್ಯ ಆರ್ಥಿಕ ಸೌಲಭ್ಯ (ರೂ ಲಕ್ಷಗಳಲ್ಲಿ)-258961, ಸೃಜಿಸುವ ಮಾನವ ದಿನಗಳು-787. ತೆಂಗು ಬೆಳೆ ಪುನಶ್ಚೇತನ (ಎತ್ತರ ತಳಿ), ಅಂತರ(ಮೀ)-9*9, ಗಿಡಗಳ ಸಂಖ್ಯೆ-123,  ಉದ್ಯೋಗ ಖಾತರಿ ಯೋಜನೆಯಡಿ ಲಭ್ಯ ಆರ್ಥಿಕ ಸೌಲಭ್ಯ (ರೂ ಲಕ್ಷಗಳಲ್ಲಿ)-42261, ಸೃಜಿಸುವ ಮಾನವ ದಿನಗಳು-125. ತೆಂಗು ಬೆಳೆ ಪುನಶ್ಚೇತನ (ಗಿಡ್ಡ ತಳಿ), ಅಂತರ(ಮೀ)- 9*9, ಗಿಡಗಳ ಸಂಖ್ಯೆ-123, ಉದ್ಯೋಗ ಖಾತರಿ ಯೋಜನೆಯಡಿ ಲಭ್ಯ ಆರ್ಥಿಕ ಸೌಲಭ್ಯ (ರೂ ಲಕ್ಷಗಳಲ್ಲಿ)-43044, ಸೃಜಿಸುವ ಮಾನವ ದಿನಗಳು-125. ಗೇರು ಬೆಳೆ ಪುನಶ್ಚೇತನ, ಗಿಡಗಳ ಸಂಖ್ಯೆ-150, ಉದ್ಯೋಗ ಖಾತರಿ ಯೋಜನೆಯಡಿ ಲಭ್ಯ ಆರ್ಥಿಕ ಸೌಲಭ್ಯ (ರೂ ಲಕ್ಷಗಳಲ್ಲಿ)- 60368, ಸೃಜಿಸುವ ಮಾನವ ದಿನಗಳು-130. ಅಡಿಕೆ ಬೆಳೆ ಪುನಶ್ಚೇತನ (25% ಮರುನಾಟಿ), ಅಂತರ(ಮೀ)- 2.7*2.7, ಗಿಡಗಳ ಸಂಖ್ಯೆ-1370, ಉದ್ಯೋಗ ಖಾತರಿ ಯೋಜನೆಯಡಿ ಲಭ್ಯ ಆರ್ಥಿಕ ಸೌಲಭ್ಯ (ರೂ ಲಕ್ಷಗಳಲ್ಲಿ)-78947, ಸೃಜಿಸುವ ಮಾನವ ದಿನಗಳು-212.  ಅಡಿಕೆ ಬೆಳೆ ಪುನಶ್ಚೇತನ (50% ಮರುನಾಟಿ) , ಅಂತರ(ಮೀ)- 2.7*2.7, ಗಿಡಗಳ ಸಂಖ್ಯೆ-1370, ಉದ್ಯೋಗ ಖಾತರಿ ಯೋಜನೆಯಡಿ ಲಭ್ಯ ಆರ್ಥಿಕ ಸೌಲಭ್ಯ (ರೂ ಲಕ್ಷಗಳಲ್ಲಿ)-148819, ಸೃಜಿಸುವ ಮಾನವ ದಿನಗಳು-404.

ಅರ್ಜಿಗಳೊಂದಿಗೆ ಸಲ್ಲಿಸಬೇಕಾಗಿರುವ ದಾಖಲಾತಿಗಳು: ಜಾಬ್ ಕಾರ್ಡ್, ಆರ್.ಟಿ.ಸಿ., ಆಧಾರ್ ಕಾರ್ಡ್, ಬಿ.ಪಿ.ಎಲ್. ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ.
ತೋಟಗಾರಿಕೆ ಇಲಾಖೆ, ಕೃಷಿ ವಿಶ್ವವಿದ್ಯಾನಿಲಯಗಳ ನರ್ಸರಿಗಳಲ್ಲಿ ಗಿಡಗಳ ಲಭ್ಯತೆ ಇರುತ್ತದೆ. ತೋಟಗಾರಿಕೆ ಇಲಾಖೆಯ ಇತರೆ ಯೋಜನೆಗಳಡಿ ಸಹಾಯಧನ ಪಡೆಯದ ರೈತರು ಈ ಯೋಜನೆಯಡಿಯಲ್ಲಿ ಸಹಾಯಧನ ಪಡೆಯಬಹುದು. ಈ ಯೋಜನೆ ಗ್ರಾಮ ಪಂಚಾಯತ್ ನಿವಾಸಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಆಸಕ್ತರು ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಉಪನಿರ್ದೇಶಕರು, ದ.ಕ. ಜಿ.ಪಂ., ಮಂಗಳೂರು ದೂರವಾಣಿ ಸಂಖ್ಯೆ 9448999226. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಮಂಗಳೂರು ದೂರವಾಣಿ ಸಂಖ್ಯೆ 8277806378 (0824-2423615), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬಂಟ್ವಾಳ  ದೂರವಾಣಿ ಸಂಖ್ಯೆ 8277806371 (08255-234102), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಪುತ್ತೂರು  ದೂರವಾಣಿ ಸಂಖ್ಯೆ 9731854527 (08251-230905), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಸುಳ್ಯ ದೂರವಾಣಿ ಸಂಖ್ಯೆ 9880993238 (08257-232020) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿ.ಪಂ., ಬೆಳ್ತಂಗಡಿ ದೂರವಾಣಿ ಸಂಖ್ಯೆ 8277806380 (08256-232148) ಸಲ್ಲಿಸಬಹುದು ಎಂದು ದ.ಕ  ಜಿಲ್ಲಾ, ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ