ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಮೂಲತಃ ತೀರ್ಥಹಳ್ಳಿಯ ಡಾ. ರಾಜೇಂದ್ರ ಕೆ.ವಿ. ನೇಮಕಗೊಂಡಿದ್ದು, ಸಿಂಧೂ ರೂಪೇಶ್ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ. ದಾವಣಗೆರೆಯಲ್ಲಿ ವೈದ್ಯ ಶಿಕ್ಷಣ ಪೂರೈಸಿದ ಡಾ. ರಾಜೇಂದ್ರ ಐಎಎಸ್ ನಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದ ಪ್ರತಿಭಾವಂತ. 2013ರಲ್ಲಿ ಐಎಎಸ್ ಅಧಿಕಾರಿಯಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಕಾರ್ಯದರ್ಶಿಯಾಗಿ, ಭಾರತೀಯ ರೈಲ್ವೆಯ ವೈದ್ಯಕೀಯ ಸೇವೆಯಲ್ಲಿ ಕರ್ತವ್ಯ ಸಲ್ಲಿಸಿದ್ದ ಅವರು, 2016ರಲ್ಲಿ ಪುತ್ತೂರಿನ ಸಹಾಯಕ ಆಯುಕ್ತರಾಗಿದ್ದರು. ಬಳಿಕ ಬೆಳಗಾವಿಯ ಜಿಪಂ ಸಿಇಒ ಆಗಿ ಕರ್ತವ್ಯ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ರಾಜೇಂದ್ರ ಅವರು ಜಿಲ್ಲೆಗೆ ಹೊಸಬರಲ್ಲದ ಕಾರಣ ಇಲ್ಲಿನ ಸ್ಥಿತಿಗತಿಯ ಅರಿವು ಅವರಿಗೆ ಚೆನ್ನಾಗಿ ಪರಿಚಯವಿದೆ. ಅದರಲ್ಲೂ ಗ್ರಾಮೀಣ ಭಾಗದ ಅರಿವು ಅವರಿಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ನಿರೀಕ್ಷೆ ಅವರಿಂದ ಇದೆ.