ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸೆಲ್ಕೋ ಫೌಂಡೇಶನ್ ಮತ್ತು ಕೆದ್ದಲಿಕೆ ಶಾಲೆ ಮಾದರಿ ಗ್ರಾಮ ಯೋಜನೆಯಡಿಲ್ಲಿ ಶಾಲೆಯಲ್ಲಿ ಸ್ಯಾನಿಟರಿ ಪ್ಯಾಡ್, ಬಳಸಿದ ಮಾಸ್ಕ್ ದಹನ ಘಟಕಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್ ಮಾತನಾಡಿ ಈ ಘಟಕದಿಂದ ಸ್ಯಾನಿಟರಿ ಪ್ಯಾಡ್, ಮೆಡಿಕಲ್ ತ್ಯಾಜ, ಬಳಸಿದ ಮಾಸ್ಕ್ ವಿಲೇವಾರಿ ಮಾಡಲು ತುಂಬಾ ಅನುಕೂಲವಾಗುತ್ತದೆ. ಈ ತ್ಯಾಜ ಹೊರಗೆ ಬಿಸಾಡಿದರೆ ರೋಗ ರುಜಿನ ಬರುವ ಸಾಧ್ಯತೆ ಜಾಸ್ತಿ. ಆದುದರಿಂದ ಬಿವಿಟಿ ಸಂಸ್ಥೆಯ ಈ ತ್ಯಾಜ ದಹನ ಘಟಕದಿಂದ ಬಹಳ ಸುಲಭವಾಗಿ ಅಪಾಯಕಾರಿ ತ್ಯಾಜಗಳ್ಳನ್ನು ವಿಲೇವಾರಿ ಮಾಡಲು ಸಾಧ್ಯ. ಅಲ್ಲದೆ ಇಂಥ ಘಟಕಗಳು ಪ್ರತಿ ಪಂಚಾಯತ್ನಲ್ಲಿ ಮಾಡಿದರೆ ಈ ತ್ಯಾಜದ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭ ರಾಷ್ಟ್ರಪ್ರಶಸ್ತಿ ವಿಜೇತ ಕೆದ್ದಲಿಕೆ ಶಾಲಾ ನಿವೃತ್ತ ಮುಖ್ಯೋಪಾಧ್ಯಯರಾದ ರಮೇಶ್ ನಾಯಕ್ ರಾಯಿ, ಶಾಲಾ ಮುಖ್ಯೋಪಾಧ್ಯಾರಾದ ಕುಮಾರ್. ಎಚ್, ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಲ್ಕಟ್ಟೆ, ಪಂಚಾಯತ್ ಸದಸ್ಯರಾದ ಮೋಹನ್ ಆಚಾರ್ಯ, ಸತೀಶ್ ಪದಂತರಬೆಟ್ಟು, ಬಿವಿಟಿ ಯೋಜನಾಧಿಕಾರಿಯಾದ ಜೀವನ್, ಶಾಲಾ ಶಿಕ್ಷಕರು, ರೈತರು, ಆಶಾ ಕಾರ್ಯಕರ್ತರು ಭಾಗವಹಿಸಿದರು.